(ವಿಶ್ವ ಕನ್ನಡಿಗ ನ್ಯೂಸ್) : ಡ್ರಗ್ಸ್ ಮಾಫಿಯಾಗಳ ನಡುವಿನ ಕಾಳಗದಲ್ಲಿ ಇಬ್ಬರು ಚೂರಿ ಇರಿತಕ್ಕೆ ಬಲಿಯಾಗಿದ್ದಾರೆ. ಕೋಝಿಕ್ಕೋಡ್ನ ಕೊಡುವಳ್ಳಿ ಸಹಕಾರಿ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ಮೃತರನ್ನು ಇಲಿನಿವಾ ಮೂಲದ ಖಾಲಿದ್ (52) ಮತ್ತು ಶಮೀರ್ (40) ಎಂದು ಗುರುತಿಸಲಾಗಿದೆ. ಅವರೊಂದಿಗಿದ್ದ ಶಾನಿಬ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಬುಧವಾರ ಸಂಜೆ ಹಿಂಸಾಚಾರ ನಡೆದಿದೆ.
ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದ ಚಾಕು ಇರಿತಕ್ಕೆ ಕಾರಣವಾಯಿತು. ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.