(www.vknews.in)
ಕರ್ನಾಟಕ ರಾಜ್ಯದ ರಾಜ್ಯಪಾಲ ಶ್ರೀ ತ್ಯಾವರೆ ಚಂದ್ ಗೆಹ್ಲೋಟ್ ಅವರನ್ನು ವಿಶ್ವ ವಿಪ್ರತ್ರಯಿ ಪರಿಷತ್ ಅಧ್ಯಕ್ಷ ಶ್ರೀ ಎಸ್. ರಘುನಾಥ್ ಅವರ ನೇತೃತ್ವದಲ್ಲಿ ಭೇಟಿ ಮಾಡಿ ದಿನಾಂಕ 07-11-2022 ರಂದು ಸರ್ವೋಚ್ಚ ನ್ಯಾಯಾಲಯವು ಆರ್ಥಿಕವಾಗಿ ದುರ್ಬಲರಾದ ಎಲ್ಲಾ ಸಮುದಾಯಗಳ ಮೀಸಲಾತಿ ಅನ್ವಯ ಸಂವಿಧಾನದ 103ನೇ ತಿದ್ದುಪಡಿಯನ್ನು ಎತ್ತಿ ಹಿಡಿದಿದ್ದು ಈ ಕುರಿತು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಈ ತೀರ್ಪನ್ನು ಸ್ವಾಗತಿಸಿರುತ್ತಾರೆ, ಸದರಿ ಮೀಸಲಾತಿಯನ್ನು ಅನೇಕ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿದ್ದು, ಈ ಮೀಸಲಾತಿಯನ್ನು ಕರ್ನಾಟಕ ರಾಜ್ಯದಲ್ಲಿಯೂ ಸಹ ಜಾರಿಗೆ ತರುವಂತೆ ಮಾನ್ಯ ಕರ್ನಾಟಕ ಸರ್ಕಾರಕ್ಕೆ ಆದೇಶಿಸಲು ಮನವಿ ಸಲ್ಲಿಸಿದರು.ಹು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿ, ಮಂಡಳಿಯ ನಿರ್ದೇಶಕರಾದ ಶ್ರೀ ಸುಬ್ಬರಾಯ ಎಂ ಹೆಗಡೆ. ಶ್ರೀ ಪವನ್ ಕುಮಾರ್. ಶ್ರೀ ಜಗನ್ನಾಥ ಕುಲಕರ್ಣಿ, ಶ್ರೀಮತಿ ವತ್ಸಲ ನಾಗೇಶ್. ಶ್ರೀ ಜಗದೀಶ ಹುನಗುಂದ,ಬಬ್ಬುರ್ ಕಮ್ಮೆ ಸಂಘದ ಅಧ್ಯಕ್ಷರಾದ ಡಾ || ಶ್ರೀ ಎ ವಿ ಪ್ರಸನ್ನ , ಉಲ್ಚಕಮ್ಮೆ ಸಂಘದ ಅಧ್ಯಕ್ಷರಾದ ಶ್ರೀ ಬಿ ವಿ ಕುಮಾರ್, ಬಡಗನಾಡು ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್, ಬಬ್ಬುರ್ ಕಮ್ಮೆ ಸಂಘದ ಕಾರ್ಯದರ್ಶಿಗಳಾದ ಡಾ ||ಶ್ರೀ ಸತ್ಯಪ್ರಕಾಶ್, ವಿಶ್ವ ವಿಪ್ರತ್ರಯೀ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ವಿ.ಮಂಜುನಾಥ್, ಖಜಾಂಚಿಗಳಾದ ಶ್ರೀ ದಿಲೀಪ್ ಸತ್ಯಾ ರವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.