ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ತಮಿಳುನಾಡಿನಲ್ಲಿ ಬಿಜೆಪಿ ಸ್ಥಳೀಯ ನಾಯಕನನ್ನು ಕೊಂದ ಪ್ರಕರಣದಲ್ಲಿ ಕೇರಳದ ಕೊಟ್ಟಾಯಂ ಮೂಲದವರೂ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಿಜೆಪಿ ತಿರುಪತ್ತೂರು ಪುರಸಭೆ ಕಾರ್ಯದರ್ಶಿ ಪಿ.ಕಾಲಿಕಣ್ಣನ್ ಅವರನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಅವರ ಬಳಿಯಿಂದ ಕೊಲೆಗೆ ಬಳಸಿದ ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.
ಕೊಟ್ಟಾಯಂ ನಿವಾಸಿ ಟಿ. ಅರುಣ್, ತಿರುಪ್ಪತ್ತೂರಿನ ಸ್ಥಳೀಯರಾದ ಎಸ್. ಹರಿ ವಿಘ್ನೇಶ್, ವಿ. ಅರುಣ್ ಕುಮಾರ್ ಮತ್ತು ಆಂಧ್ರಪ್ರದೇಶದ ಕೆ. ಮಣಿ ಕಂದನ್ ಮತ್ತು ಆನಂದ್ ಬಂಧಿತರು. ಅವರಲ್ಲದೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಪ್ರಾಪ್ತ ಬಾಲಕನನ್ನು ಸಹ ಬಂಧಿಸಿದ್ದಾರೆ.
ಕಳೆದ ದಿನ ಅರುಣ್ ಅವರನ್ನೊಳಗೊಂಡ ಕೊಟೇಶನ್ ಗ್ರೂಪ್ ಕಾಳಿಕಣ್ಣನ್ ಅವರನ್ನು ಕಡಿದು ಹತ್ಯೆ ಮಾಡಿತ್ತು. ಈ ಹಿಂದೆ ಹರಿ ವಿಘ್ನೇಶ್ ಮತ್ತು ಕಾಲಿಕಣ್ಣನ್ ನಡುವೆ ಜಗಳವಾಗಿತ್ತು. ಇದರ ಮುಂದುವರಿದ ಭಾಗವಾಗಿಯೇ ಈ ಕೊಲೆ ನಡೆದಿದೆ. ಹೆಚ್ಚಿನ ಮಾಹಿತಿಗಾಗಿ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.