(www.vknews.in) ಪುತ್ತೂರು : Puncha.in ಇದರ ಹೊಸ ಉತ್ಪನ್ನಗಳಾದ ಇನ್ವರ್ಟರ್, ವಾಟರ್ ಪ್ಯೂರಿಫೈಯರ್ ಹಾಗೂ ಇತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮ ಮೈಸೂರಿನ ಎಸ್ ಕೆ ಎಲಿಗನ್ಸ್ ಹೋಟೆಲ್ ನಲ್ಲಿ ನಡೆಯಿತು.
ವರ್ಣರಜಿತವಾಗಿ ನಡೆದ ಈ ಶುಭ ಸಮಾರಂಭದಲ್ಲಿ Puncha.In ತನ್ನ ಹೊಸ ಮುಖವನ್ನು ಮಾರುಕಟ್ಟೆಗೆ ಪರಿಚಯಿಸುವುದರ ಜೊತೆಗೆ ತನ್ನ ಹೊಸ ಲೋಗೋವನ್ನು ಬಿಡುಗಡೆಗೊಳಿಸಿತು. ಪರಿಶುದ್ಧತೆಯ ಧಾನ್ಯ ( A GRAIN OF PURITY) ಎಂಬ ಸ್ಲೋಗನ್ ನೊಂದಿಗೆ ಗ್ರಾಹಕರಿಗೆ ಎಂದಿಗೂ ಗುಣಮಟ್ಟದ ಉತ್ಪನ್ನಳನ್ನು ಮಾತ್ರವೇ ನೀಡುತ್ತದೆ ಎಂದು ತಿಳಿಸಲಾಯಿತು.
ಪ್ರಸ್ತುತ ಕೇರಳ ಹಾಗೂ ಕರ್ನಾಟಕದ ವಿವಿಧ ಕಡೆಗಳಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯಿಂದ ಪರಿಪೂರ್ಣ ಗುಣಮಟ್ಟ ಹಾಗೂ ಬೆಲೆಬಾಳುವ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಾಧ್ಯವಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿತು. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು, ಸಂಸ್ಥೆಯ ಹಿತೈಷಿಗಳು , Puncha.In ಇದರ ಸದಸ್ಯರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.