(www.vknews.in). ಪ್ರತಿ ವರ್ಷ ನವೆಂಬರ್ 26 ರಂದು ದೇಶಾದ್ಯಂತ ಸಂವಿಧಾನ ದಿವಸ ಅಥವಾ ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತದೆ. 1949ನೇ ನವೆಂಬರ್ 26 ರಂದು ಭಾರತ ಸರಕಾರದ ಸಂವಿಧಾನ ಸಮಿತಿ ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ಅನುಮೋದಿಸಿತ್ತು. ಇದರ ಸವಿನೆನಪಿಗಾಗಿ ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ. ಆದರೆ ನಮ್ಮ ಸಂವಿಧಾನ ಜನವರಿ 26, 1950 ರಂದು ಜಾರಿಗೆ ಬಂದಿತು. ಆದ ಕಾರಣ ಜನವರಿ 26ನ್ನು ಗಣರಾಜ್ಯೋತ್ಸವ ದಿನ ಎಂದು ಆಚರಿಸಲಾಗುತ್ತದೆ.
ಭಾರತ ಸರಕಾರ 19 ನವೆಂಬರ್ 2018 ರಂದು ಗಜೆಟ್ ನೋಟಿಸ್ (ಸರಕಾರಿ ಅಧಿಸೂಚನೆ) ಮುಖಾಂತರ ನವೆಂಬರ್ 26ನ್ನು ಸಂವಿಧಾನ ದಿವಸ ಎಂದೂ ಘೋಷಿಸಿತು. ಅದೇ ದಿನ ಮುಂಬೈಯಲ್ಲಿ ನಮ್ಮ ಸಂವಿಧಾನದ ಶಿಲ್ಪಿ ಶ್ರೀ ಬಿ.ಆರ್ ಅಂಬೇಡ್ಕರ್ ಅವರ ಸಮಾನತೆಯ ವಿಗ್ರಹ ಸ್ಥಾಪನೆಯ ಶಂಕುಸ್ಥಾಪನೆ ನೆರವೇರಿತು. ಇದರ ಮೊದಲು ನವೆಂಬರ್ 26ರನ್ನು ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು. 2015ರ ನಂತರ ಪ್ರತಿ ವರ್ಷ ಈ ದಿನವನ್ನು ಸಂವಿಧಾನ ದಿವಸ ಎಂದು ಮರುನಾಮಕರಣ ಮಾಡಿ ಜನರಲ್ಲಿ ಸಂವಿಧಾನದ ಅವಶ್ಯಕತೆ ಮತ್ತು ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ಹಾಗೂ ಶ್ರೀ ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಧ್ಯೇಯಗಳು ಜನರಿಗೆ ತಲುಪಿಸಲು ಈ ಬದಲಾವಣೆ ಮಾಡಲಾಗಿತ್ತು. ವಿಶ್ವದ ಅತ್ಯಂತ ಸುದೀರ್ಘವಾದ ಸಂವಿಧಾನ ಎಂಬ ಹೆಗ್ಗಳಿಕೆ ಹೊಂದಿರುವ ನಮ್ಮ ಸಂವಿಧಾನ, ನಮ್ಮ ದೇಶದ ವೈವಿಧ್ಯಮಯ ಭಾಷೆ, ಧರ್ಮ, ನಂಬಿಕೆ, ಪ್ರಾದೇಶಿಕತೆ, ಬುಡಕಟ್ಟು, ಸಾಮಾಜಿಕ ವಿಭಿನ್ನತೆ, ಆರ್ಥಿಕ ಅಸಮಾನತೆ ಹೀಗೆ ಎಲ್ಲವನ್ನು ಮೀರಿ ಸಮಾನತೆಯ ರಾಷ್ಟ್ರೀಯ ಚೌಕಟ್ಟು ಒದಗಿಸುವ ಮೂಲ ದಾಖಲೆಯೇ ನಮ್ಮ ಭಾರತದ ಅತ್ಯಮೂಲ್ಯ ಸಂವಿಧಾನ. ಈ ಸಂವಿಧಾನ ಎಂದರೆ ನಮ್ಮ ದೇಶದ ಅಡಿಪಾಯ ಅಥವಾ ಮೂಲಾಧಾರ ಎಂದರೂ ತಪ್ಪಾಗಲಾರದು.
ಸಂವಿಧಾನ ಎಂದರೇನು? ಸಂವಿಧಾನ ಎಂದರೆ ಒಂದು ರಾಷ್ಟ್ರದ ಸರಕಾರೀ ರಚನೆ, ವಿವಿಧ ಸ್ಥರಗಳ ಅಧಿಕಾರ ಹಂಚಿಕೆ, ಸರಕಾರದ ಅಧಿಕಾರ ಮತ್ತು ಕರ್ತವ್ಯಗಳ ವ್ಯಾಖ್ಯಾನ, ಪ್ರಜೆಗಳ ಹಕ್ಕುಗಳು ಮತ್ತು ಭಾದ್ಯತೆಗಳ ವಿವರಣೆ, ಇದರ ಜೊತೆಗೆ ಸರಕಾರ ಹಾಗೂ ಪ್ರಜೆಗಳ ನಡುವಿನ ಸುಂದರವಾದ ಸಂಬಂಧವನ್ನು ಅತ್ಯಂತ ನಾಜೂಕಾಗಿ ವಿವರಿಸಲ್ಪಟ್ಟ ಒಂದು ವ್ಯಾಖ್ಯಾನ ಎಂದರೂ ತಪ್ಪಾಗಲಾರದು.
ನಮ್ಮ ಸಂವಿಧಾನದ ರಚನೆಗಾಗಿ 1946, ದಶಂಬರ್ 9 ರಂದು ದೆಹಲಿಯಲ್ಲಿ 211 ಮಂದಿ ಸಮಿತಿ ರಚನೆಯಾಗಿ ಡಾ|| ಬಾಬು ರಾಜೇಂದ್ರ ಪ್ರಸಾದ್ ಈ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ, ಹೆಚ್.ಸಿ. ಮುಖರ್ಜಿ ಉಪಾಧ್ಯಕ್ಷರಾಗಿ, ಬ್ಯಾರಿಸ್ಟರ್ ಬೆನಗಲ್ ನರಸಿಂಹ ರಾಯರು ಸಂವಿಧಾನದ ಸಲಹೆಗಾರರಾಗಿ ಆಯ್ಕೆಯಾದರು. 5 ಪ್ರಮುಖ ಸಮಿತಿ ಮತ್ತು 15 ಉಪಸಮಿತಿ ಮಾಡಲಾಯಿತು. ಇದರಲ್ಲಿ ಪ್ರಮುಖವಾದ ಕರಡು ರಚನಾ ಸಮಿತಿಗೆ ಡಾ|| ಬಿ.ಆರ್ ಅಂಬೇಡ್ಕರ್ ಅಧ್ಯಕ್ಷರಾದರು. ಈ ಸಮಿತಿ ಒಟ್ಟು 2 ವರ್ಷ 11 ತಿಂಗಳು 18 ದಿನಗಳ ಕೆಲಸ ಮಾಡಿ, ಭಾರತದ ಸಂವಿಧಾನಕ್ಕೆ ಜನ್ಮ ನೀಡಿದರು. ಈ ಸಂವಿಧಾನದ ಸಿದ್ಧತೆಗೆ ಆಗ ತಗಲಿದ ಒಟ್ಟು ವೆಚ್ಚ 6.4 ಕೋಟಿ ರೂಪಾಯಿ. 1949, ನವೆಂಬರ್ 26 ರಂದು ಬೆಳಿಗ್ಗಿನ 10 ಗಂಟೆ 18 ನಿಮಿಷಕ್ಕೆ ಸಂವಿಧಾನ ರಚನಾ ಸಭೆ ಒಕ್ಕೊರಲಿನಿಂದ ಅಂಗೀಕರಿಸಿತು ಮತ್ತು ಅಂದೇ 299 ಸದಸ್ಯರ ಪೈಕಿ 284 ಮಂದಿ ಸಮಗ್ರ ಭಾರತದ ಪರವಾಗಿ ತಮ್ಮ ಹಸ್ತಾಕ್ಷರ ನೀಡಿ ಅನುಮೋದಿಸಿದರು. ಮೂಲ ಸಂವಿಧಾನ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿದ್ದು, ಅದು ಮುದ್ರಿತವಾಗಲಿಲ್ಲ, ಬದಲಾಗಿ ಅದು ಪ್ರೇಮ್ ಬಿಹಾರಿ ನಾರಾಯಣ ರಾಯ್ಜಾದಾ ಇವರ ಕೈ ಬರಹದಲ್ಲಿ ಇದೆ. ಭಾರತ ಸಂವಿಧಾನದ ಮೊದಲ ಹಿಂದಿ ಮತ್ತು ಇಂಗ್ಲೀಷ್ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹಿಲೀಯಂ ತುಂಬಿದ ಕನ್ನಡಿ ಮುಚ್ಚಿದ ಪೆಟ್ಟಿಗೆಯೊಳಗೆ ಭದ್ರವಾಗಿ ಸುರಕ್ಷಿತವಾಗಿ ಸಂರಕ್ಷಿಸಿ ಇಡಲಾಗಿದೆ. ನಮ್ಮ ಸಂವಿಧಾನ ಅತ್ಯಂತ ಸುದೀರ್ಘ ಸಂವಿಧಾನ ಆಗಿದ್ದು 395 ವಿಧಿಗಳನ್ನು ಹಾಗೂ 8 ಶೆಡ್ಯೂಲ್ಗಳನ್ನು ಹೊಂದಿದೆ. ಈ ಸಂವಿಧಾನದ ಮೊದಲ ಪುಟದಲ್ಲಿ ಸುಂದರವಾದ ಪ್ರಸ್ತಾವನೆ ಇದೆ. ಇದು ಸಮಗ್ರ ಸಂವಿಧಾನದ ಸಾರವನ್ನು ಧ್ವನಿಸುವಂತಿದೆ. We ಣhe ಠಿeoಠಿಟe oಜಿ Iಟಿಜiಚಿ (ಭಾರತದ ಪ್ರಜೆಗಳಾದ ನಾವು) ಎಂಬ ಒಕ್ಕಣೆಯಿಂದ ಆರಂಭವಾಗುವ ಈ ಪ್ರಸ್ತಾವನೆ ಅಥವಾ ಸಂವಿಧಾನಿಕ ಪೀಠಿಕೆ ನಮ್ಮ ಮಣ್ಣಿನ ಮೂಲ ಆಶಯಗಳನ್ನು ಪ್ರತಿಯೊಂದು ಶಬ್ದಗಳಲ್ಲಿ ಮುತ್ತಿನಂತೆ ಪೋಣಿಸಿ ಅರ್ಥಗರ್ಭಿತ ಹಾಗೂ ಮಾರ್ಮಿಕವಾಗಿ ಪ್ರತಿಭವಿಸಲಾಗಿದೆ. ಈ ಪದಪುಂಜಗಳಲ್ಲಿ ಸಾರ್ವಭೌಮ (Soveಡಿeigಟಿ) ಪ್ರಜಾತಂತ್ರ (ಆemoಛಿಡಿಚಿಛಿಥಿ) ಧರ್ಮ ನಿರಪೇಕ್ಷ (Seಛಿuಟಚಿಡಿ), ಸಮಗ್ರತೆ, (Iಟಿಣegಡಿiಣಥಿ) ಮತ್ತು ಸಮಾಜವಾದಿತ್ವ (Soಛಿiಚಿಟisಣ) ಪ್ರಮುಖವಾಗಿ ಎದ್ದು ಕಾಣುತ್ತದೆ. ಈ ಸಂವಿಧಾನದ ರಚನೆಯಲ್ಲಿ ಕರ್ನಾಟಕದ ಕೆ.ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಸಿದ್ದವೀರಪ್ಪ, ಎಸ್.ನಿಜಲಿಂಗಪ್ಪ, ಟಿ ಚೆನ್ನಯ್ಯ, ಟಿ,ಸಿದ್ದಲಿಂಗಯ್ಯ, ಎಸ್.ವಿ ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ ಪ್ರಮುಖರಾಗಿರುತ್ತಾರೆ. ಅದೇ ರೀತಿ ಅಂದಿನ ಮದ್ರಾಸ್ ಪ್ರಾಂತ್ಯದ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆನಗಲ್ ನರಸಿಂಹ ರಾವ್, ಉಳ್ಳಾಲ ಶ್ರೀನಿವಾಸ ಮಲ್ಯ, ಹೆಚ್.ವಿ.ಕಾಮತ್, ಬೆನಗಲ್ ಶಿವರಾವ್ ಹಾಗೂ ಕೆ. ಫಾದರ್ ಜೆರೋಮ್ ಡಿ’ಸೋಜಾ ಮುಂತಾದವರು ಈ ಸಭೆಯಲ್ಲಿ ರಚನಾತ್ಮಕ ಪಾತ್ರ ವಹಿಸಿದ್ದರು ಎನ್ನುವುದು ಬಹಳ ಹೆಮ್ಮೆಯ ವಿಚಾರ. ಈ ಸಂವಿಧಾನ ಪುಸ್ತಕದ ಆರಂಭದಲ್ಲಿ ಭಾರತದ ಒಕ್ಕೂಟದ ಬಗ್ಗೆ ಮತ್ತು ಪೌರತ್ವದ ಬಗ್ಗೆ ಸಮಗ್ರವಾಗಿ ವಿವರಣೆ ನೀಡಲಾಗಿದೆ. ನಂತರದ ಪುಟಗಳಲ್ಲಿ ಮೂಲಭೂತ ಹಕ್ಕುಗಳು, ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಕ್ಕುಗಳು ಹೀಗೆ ಎಲ್ಲವನ್ನು ಸಮಗ್ರವಾಗಿ ವಿವರಣೆ ನೀಡಲಾಗಿದೆ.
ಕೊನೆಮಾತು: ನಮ್ಮ ಮೂಲ ಸಂವಿಧಾನದಲ್ಲಿ 8 ಅನುಸೂಚಿ (ಪರಿಚ್ಛೇದಗಳು) ಅಥವಾ ಶೆಡ್ಯೂಲ್ಗಳು ಇದ್ದವು. ಆ ಬಳಿಕ 1951 ರ ಒಂದನೇ ತಿದ್ದುಪಡಿ ಮೂಲಕ 9 ರ ಅನುಸೂಚಿ, 1985 ರ 51ನೇ ತಿದ್ದುಪಡಿ ಮೂಲಕ 10ನೇ ಅನುಸೂಚಿ, 1992ರ 73ನೇ ತಿದ್ದುಪಡಿ ಮೂಲಕ 11ನೇ ಅನುಸೂಚಿ ಹಾಗೂ 74ನೇ ತಿದ್ದುಪಡಿ ಮೂಲಕ 12ನೇ ಅನುಸೂಚಿ ಸೇರ್ಪಡೆಗೊಂಡವು. ಮೂಲ ಸಂವಿಧಾನ ಪದೇ ಪದೇ ಬದಲಾಗುವುದು ಸಮಂಜಸ ಅಲ್ಲ ಎಂಬುದು ರಾಜಕೀಯ ಶಾಸ್ತ್ರ ತಜ್ಞರ ಅಭಿಮತವಾದರೂ, ಸಂವಿಧಾನ ನಿಂತ ನೀರಿನಂತಾಗಬಾರದು, ಗತಿಶೀಲತೆ, ಸಂವೇದನಾ ಶೀಲತೆ ಹಾಗೂ ಕಾಲಚಕ್ರದ ಪರಿಭ್ರಮಣೆಗೆ ಪೂರಕ ಸ್ಪಂದನೆ ಚಿಂತನೆಯ ಪ್ರತಿಬಿಂಬವಾಗಬೇಕು ಎಂಬುದೇ ನಮ್ಮ ಆಶಯವಾಗಿರುತ್ತದೆ. ನೆನಪಿರಲಿ 2 ಶತಮಾನ ಮೀರಿದ ಸಂಭ್ರಮ ಕಂಡಿರುವ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನ ಕೇವಲ 26 ತಿದ್ದುಪಡಿ (ಂmeಟಿಜmeಟಿಣ) ಗಳನ್ನು ಕಂಡಿದೆ. ಆದರೆ ಕೇವಲ 7 ದಶಕಗಳ ಗಡಿದಾಟಿದ ನಮ್ಮ ಸಂವಿಧಾನದಲ್ಲಿ ಘಟಿಸಿದ ತಿದ್ದುಪಡಿಗಳ 104 ಸಂಖ್ಯೆಯನ್ನು ಮೀರಿದೆ. ಇದೇ ವೇಗದಲ್ಲಿ ಅಥವಾ ನಿಷ್ಪತಿಯಲ್ಲಿ ಲೆಕ್ಕ ಹಾಕಿದರೆ ನಮ್ಮ ಸಂವಿಧಾನವೂ ದ್ವಿಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ 352ಕ್ಕೂ ಮಿಕ್ಕಿದ ತಿದ್ದುಪಡಿಗೆ ಒಳಗಾಗಿ ಮೂಲ ಸಂವಿಧಾನದ ಗುರುತೇ ಸಿಗಲಾರದೇನೋ ಎಂಬ ಜಿಜ್ಞಾನೆ ಹಲವರಲ್ಲಿ ಈಗಾಗಲೇ ಬಂದಿರಬಹುದು. ಅದೇನೇ ಇರಲಿ ಸ್ವಾತಂತ್ರ್ಯ ಪಡೆದು 75 ವರ್ಷ ಘಟಸಿ ಈ ಸ್ವಾತಂತ್ರ್ಯೋತ್ಸವ ಅಮೃತವರ್ಷದ ಸುಸಂದರ್ಭದಲ್ಲಿ ಇರುವ ನಮಗೆ, ನಮ್ಮ ಸಂವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿಚಾರಗಳು ಜನಮಾನಸಕ್ಕೆ ತಲುಪಲಿ ಎಂದು ಆಶಿಸೋಣ. ಇದರಿಂದ ನಮ್ಮ ಜನರಲ್ಲಿ ದೇಶದ ಬಗ್ಗೆ ಹೆಚ್ಚಿನ ಅಭಿಮಾನ ಮೂಡಲಿ ಮತ್ತು ನಮ್ಮಲ್ಲಿ ಸುಪ್ತವಾಗಿರುವ ದೇಶಭಕ್ತಿ ಮತ್ತಷ್ಟು ಜಾಗೃತವಾಗಲಿ ಹಾಗೂ ಆ ಮೂಲಕ ನಮ್ಮ ಹೆಮ್ಮೆಯ ಭಾರತ, ವಿಶ್ವದ ಹಿರಿಯಣ್ಣನಾಗಿ ಹೊರಹೊಮ್ಮಲಿ ಎಂದು ತುಂಬು ಹೃದಯದಿಂದ ಹಾರೈಸೋಣ. ಡಾ|| ಮುರಲೀ ಮೋಹನ್ ಚೂಂತಾರು ಸಮಾದೇಷ್ಟರು ದ.ಕ. ಜಿಲ್ಲಾ ಗೃಹರಕ್ಷಕ ದಳ ಮಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.