ಅಲ್ ಮದ್ರಸತುಲ್ ಅಝೀಝಿಯ್ಯಾ ದೋರ್ಮೆ, ಪೆರ್ನೆ. ಮದ್ರಸದಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದ ಮುಹಮ್ಮದ್ ಅಬ್ರಾರ್ ಕರ್ವೇಲ್ ಎಂಬ ವಿದ್ಯಾರ್ಥಿಯು ದಿನಾಂಕ 05/11/2022ರಂದು ಇಹಲೋಕ ತ್ಯಜಿಸಿದ್ದು ಮೃತ ಹುಡುಗನ ಹೆಸರಿನಲ್ಲಿ ದಿನಾಂಕ 27/11/22ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 07:30ಕ್ಕೆ ಕುರ್ ಆನ್ ಪಾರಾಯಣ , ತಹ್ಲೀಲ್ ಸಮರ್ಪಣೆ ಮತ್ತು ದುಆ ಮಜ್ಲಿಸ್ ನಡೆಸಲಾಯಿತು, ಮದರಸದ 100 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಸಹಪಾಠಿಯ ಹೆಸರಿನಲ್ಲಿ ನಡೆಸಿದ ತಹ್ಲಿಲ್ ಮಜ್ಲಿಸ್ ನಲ್ಲಿ ಪಾಲ್ಗೊಳ್ಳುವುದ ರೊಂದಿಗೆ , ಜಮಾಅತ್ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಹಲವು ವ್ಯಕ್ತಿಗಳು ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಜಮಾ ಅತ್ ಉಪಾಧ್ಯಕ್ಷರಾದ ಜಿ ಎಂ ಕಾಮಿಲ್ ಸಖಾಫಿ, ಅಬ್ದುಲ್ಲಾ ಶಾಲಿಮಾರ್, ಪ್ರಧಾನ ಕಾರ್ಯದರ್ಶಿ ಮೊಯಿದಿನ್ ಕುಟ್ಟಿ, ಮಾಜಿ ಕಾರ್ಯದರ್ಶಿ ಇಬ್ರಾಹಿಂ ಪಲ್ಲತ್ತಾರು, ಅಬ್ದುಲ್ ರಶೀದ್ ದೋರ್ಮೆ, ಮೃತ ವಿದ್ಯಾರ್ಥಿಯ ತಂದೆ N.A.ಅಬೂಬಕ್ಕರ್ ಹೂಹಾಕುವಕಲ್ಲು. ಮುತ್ತಾತ ಮೋನು ಹಾಜಿ ಕರ್ವೇಲ್ , ಚಿಕ್ಕಪ್ಪ ಉಮರುಲ್ ಫಾರೂಖ್ ಸಅದಿ, ಮಾವ ಇರ್ಶಾದ್ ಕರ್ವೇಲ್ ಉಪಸ್ಥಿತ ರಿದ್ದರು,
ಕಾರ್ಯಕ್ರಮಕ್ಕೆ ಜಮಾಅತ್ ಖತೀಬರಾದ ಅಬ್ದುಲ್ ರಝಾಕ್ ಫೈಝಿ ಯವರ ನೇತೃತ್ವ ನೀಡಿದರು. ಪ್ರಾಸ್ತಾವಿಕವಾಗಿ ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಅಮ್ಜದಿ ಇಂತಹ ಮಜ್ಲಿಸ್ ಗಳ ಆವಶ್ಯಕತೆ ಮತ್ತು ಅನಿವಾರ್ಯತೆಯನ್ನು ತಿಳಿಸಿದರು, ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೆ ಬೇಕಾಗಿ ಅಲ್ಲಾಹನಲ್ಲಿ ಪ್ರಾರ್ಥಿಸುವ ಅಗತ್ಯತೆ ಹಾಗೂ ಮಕ್ಕಳ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುವ ಬಗೆಗಿನ ತಮ್ಮ ಅನುಭವಗಳನ್ನು ವಿವರಿಸಿದರು.
ಮದರಸದ ಮುಅಲ್ಲಿಂ ಅಬ್ದುಲ್ ಮಜೀದ್ ಮಿಸ್ಬಾಹಿ ಕಾರ್ಯಕ್ರಮ ನಿರ್ವಹಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.