ಶಿರಸಿ (ವಿಶ್ವ ಕನ್ನಡಿಗ ನ್ಯೂಸ್) : ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಹಾವು ಕಚ್ಚಿ ಮೃತಪಟ್ಟ ಘಟನೆ ಬನವಾಸಿ ದಾಸನಕೊಪ್ಪ ವೃತ್ತದಲ್ಲಿ ನಡೆದಿದೆ. ತರಾನ್ ಮಹಮದ್ ಸಾಬ್ ಮೃತಪಟ್ಟ ಮಗು. ಆಟವಾಡುತ್ತಿದ್ದ ಮಗು ಹಠಾತ್ತನೆ ಅಳಲು ಪ್ರಾರಂಭಿಸಿದೆ ಮತ್ತು ಕಚ್ಚಿದ ಬಗ್ಗೆ ಸನ್ನೆ ಮಾಡುತ್ತಿತ್ತು. ಆದರೂ ಪೋಷಕರು ಇರುವೆ ಕಚ್ಚಿರಬಹುದೆಂದು ಸುಮ್ಮನಾಗಿದ್ದರು.
ಸ್ವಲ್ಪ ಹೊತ್ತಿನಲ್ಲೆ ಮಗುವಿನ ಬಾಯಿಯಲ್ಲಿ ನೊರೆ ಬರಲು ಪ್ರಾರಂಭವಾಗಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಮಗು ಮೃತಪಟ್ಟಿತ್ತು, ಬಳಿಕ ವೈದ್ಯರು ಪರೀಕ್ಷಿಸಿ ಮಗುವಿಗೆ ಹಾವು ಕಚ್ವಿರುವ ಬಗ್ಗೆ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.