ರಾಂಚಿ (ವಿಶ್ವ ಕನ್ನಡಿಗ ನ್ಯೂಸ್) : ಪತ್ನಿ ಮುಖ ತೊಳೆಯುವ ವೇಳೆ ಮುಖಕ್ಕೆ ಆ್ಯಸಿಡ್ ಸುರಿದು ಪತಿ ಹಲ್ಲೆ ನಡೆಸಿದ್ದಾನೆ. ಜಾರ್ಖಂಡ್ನ ರಾಂಚಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ, ನಮ್ಕುಮ್ ಮೂಲದ ಅಮೀರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೌಟುಂಬಿಕ ಸಮಸ್ಯೆಯೇ ಹಲ್ಲೆಗೆ ಕಾರಣ. ಪತ್ನಿ ಹೀನಾ ಜತೆ ಪತಿ ನಿತ್ಯ ಜಗಳವಾಡುತ್ತಿದ್ದ. ನಿನ್ನೆ ಬೆಳಗ್ಗೆ ಹೀನಾ ಮುಖ ತೊಳೆಯುತ್ತಿದ್ದಾಗ ಮನೆಗೆ ಬಂದ ಅಮೀರ್ ಆಕೆಯ ಮುಖದ ಮೇಲೆ ಸ್ಟೀಲ್ ಜಗ್ ನಲ್ಲಿ ಆಸಿಡ್ ಎರಚಿ ಮನೆಯಿಂದ ಹೊರ ಹೋಗಿದ್ದಾನೆ. ಮಹಿಳೆಯ ಕಿರುಚಾಟ ಕೇಳಿದ ಸ್ಥಳೀಯರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.