(www.vknews.in) ಬೆಂಗಳೂರು, ಡಿಸೆಂಬರ್ 5, 2022: ಕೆನರಾ ಯೂನಿಯನ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕೆನರಾ ಯೂನಿಯನ್ ಬ್ಯಾಡ್ಮಿಂಟನ್ ಲೀಗ್ (ಸಿಯುಬಿಎಲ್)ನ ಮೂರನೇ ಆವೃತ್ತಿಯಲ್ಲಿ ಬಿಎಂಆರ್ಜಿ ಟೈಗರ್ಸ್ ಪ್ರಶಸ್ತಿ ಗೆದ್ದುಕೊಂಡಿದೆ.
ಶನಿವಾರ ಇಲ್ಲಿನ ಪ್ರಕಾಶ್ ಕೋರ್ಟ್ನಲ್ಲಿ ನಡೆದ ಸಿಯುಬಿಎಲ್ ಸೀಸನ್ 3 ಫೈನಲ್ನಲ್ಲಿ ಬಿಎಂಆರ್ಜಿ ಟೈಗರ್ಸ್ ತಂಡ ಕಾರ್ಪ್ ಡೈಮ್ ತಂಡವನ್ನು 3-0 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬಿ.ಆರ್.ಶ್ರೀಧರ ಮಾಲೀಕತ್ವದ ಬಿಎಂಆರ್ಜಿ ಟೈಗರ್ಸ್ ಲೀಗ್ ಹಂತದಿಂದಲೇ ಬಿಗಿಯಾದ ಹಿಡಿತವನ್ನು ಹೊಂದಿತ್ತು ಮತ್ತು ಫೈನಲ್ನಲ್ಲೂ ವಿಜಯಶಾಲಿಯಾಯಿತು.
ಮೊದಲ ಗೇಮ್ನಲ್ಲಿ ಶಂತನು ಮತ್ತು ಪ್ರದೀಪ್ ಅವರ ಉತ್ತಮ ಪ್ರದರ್ಶನ ಬಿಎಂಆರ್ಜಿ ಟೈಗರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು ಕಾರ್ಪ್ ಡೈಮ್ನ ವೆಂಕಟ್ ಮತ್ತು ಸಾಥ್ವಿಕ್ ಅವರನ್ನು 21-14, 21-14 ನೇರ ಸೆಟ್ಗಳಿಂದ ಸೋಲಿಸಿದರು.
ಎರಡನೇ ಗೇಮ್ನಲ್ಲಿ ಬಿಎಂಆರ್ಜಿ ಟೈಗರ್ಸ್ನ ಗ್ಲೆನ್ ಮತ್ತು ಭಾಸ್ಕರ್ 21-11, 21-15 ನೇರ ಸೆಟ್ಗಳಿಂದ ಕಾರ್ಪ್ ಡೈಮ್ನ ಅಜಿತ್ ಮತ್ತು ದಿನು ಅವರನ್ನು ಸೋಲಿಸಿದರು.
ಮೂರನೇ ಗೇಮ್ನಲ್ಲಿ ಬಿಎಂಆರ್ಜಿ ಟೈಗರ್ಸ್ನ ಡಾ.ದಯಾನಂದ್ ಮತ್ತು ಆಯುಷ್ 21-15, 21-18 ನೇರ ಸೆಟ್ಗಳಿಂದ ಕಾರ್ಪ್ ಡೈಮ್ನ ನಿರಂಜನ್ ಮತ್ತು ನರಸಿಂಹನ್ ಅವರನ್ನು ಸೋಲಿಸಿದರು.
ಅಂತಿಮ ಫಲಿತಾಂಶ – ಬಿಎಂಆರ್ಜಿ ಟೈಗರ್ಸ್ ತಂಡ ಕಾರ್ಪ್ ಡೈಮ್ ವಿರುದ್ಧ 5 ಪಂದ್ಯಗಳ ಪೈಕಿ ಮೊದಲ ಮೂರನ್ನು ಗೆದ್ದು 3-0 ಅಂತರದಲ್ಲಿ ಪ್ರಶಸ್ತಿ ಜಯಿಸಿತು.
ಬಿಎಂಆರ್ಜಿ ಟೈಗರ್ಸ್, ಕಾರ್ಪ್ ಡೈಮ್, ಲೆ ಗ್ರೇಪ್ಸ್ ಚಾಂಪಿಯನ್ಸ್, ಇಂಡೋಗಾಸ್ ಚಾಲೆಂಜರ್ಸ್, ಜೆಕೆ ಸೂಪರ್ ಕಿಂಗ್ಸ್ ಮತ್ತು ಡಿಕೆ ವಾರಿಯರ್ಸ್ ಹೀಗೆ 6 ತಂಡಗಳ ಭಾಗವಹಿಸುವಿಕೆಗೆ ಸಿಯುಬಿಎಲ್ ಸಾಕ್ಷಿಯಾಗಿದೆ ಎಂದು ಗಮನಿಸಬಹುದು. ಒಟ್ಟಾರೆಯಾಗಿ, ಪಂದ್ಯಾವಳಿಯಲ್ಲಿ ಒಟ್ಟು 90 ಆಟಗಾರರು ಭಾಗವಹಿಸಿದ್ದರು, ಇದು ಮೂಲಭೂತವಾಗಿ ಎಲ್ಲಾ ವಿಭಾಗಗಳ ಆಟಗಾರರಿಗೆ ಅವಕಾಶ ಕಲ್ಪಿಸಿತು.
ರೌಂಡ್ ರಾಬಿನ್ ಲೀಗ್ ಬಳಿಕ 4 ತಂಡಗಳು ಸೂಪರ್ ಲೀಗ್ ಹಂತಕ್ಕೆ ಮುನ್ನಡೆದವು ಮತ್ತು ಪಾಯಿಂಟ್ಗಳ ಆಧಾರದ ಮೇಲೆ ಈ ಕೆಳಗಿನ ಕ್ರಮದಲ್ಲಿ ಶ್ರೇಯಾಂಕ ನೀಡಲಾಯಿತು – ಬಿಎಂಆರ್ಜಿ ಟೈಗರ್ಸ್, ಕಾರ್ಪ್ ಡೈಮ್, ಇಂಡೋಗಾಸ್ ಚಾಲೆಂಜರ್ಸ್ ಮತ್ತು ಡಿಕೆ ವಾರಿಯರ್ಸ್.
ಬಿಎಂಆರ್ಜಿ ಟೈಗರ್ಸ್ ಕ್ವಾಲಿಫೈಯರ್ನಲ್ಲಿ ಕಾರ್ಪ್ ಡೈಮ್ ತಂಡವನ್ನು 3-2 ರಿಂದ ಸೋಲಿಸಿ ಫೈನಲ್ಗೆ ಪ್ರವೇಶಿಸಿದರೆ, ಡಿಕೆ ವಾರಿಯರ್ಸ್ ಎಲಿಮಿನೇಷನ್ ಸುತ್ತಿನಲ್ಲಿ 3-0 ಇಂಡೋಗಾಸ್ ಚಾಲೆಂಜರ್ಸ್ ಅನ್ನು ಸೋಲಿಸಿತು. ಕಾರ್ಪ್ ಡೈಮ್ ಆ ಬಳಿಕ ಡಿಕೆ ವಾರಿಯರ್ಸ್ ತಂಡವನ್ನು 3-2 ಅಂತರದಲ್ಲಿ ಸೋಲಿಸಿ ಫೈನಲ್ಗೆ ಮುನ್ನಡೆದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.