(www.vknews.in) ಎಚ್ಎಫ್ ಪ್ರಾಜೆಕ್ಟ್ ಆಶಿಯಾನದ ಅಡಿಯಲ್ಲಿ ಬಡವರಿಗೆ ನಿರ್ಗತಿಕರಿಗೆ ಹೊಸ ಮನೆ ನಿರ್ಮಿಸಿ ಕೊಡುವಂತಹ 26ನೇ ಮನೆಯನ್ನು ಸಜೀಪ ಸಮೀಪದ ಬೊಲಿ ಪದವು ಎಂಬಲ್ಲಿ ವಿಧವೆ ಫಲಾನುಭವಿಗೆ ಹಸ್ತಾಂತರಿಸಲಾಯಿತು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಹಸನ್ (EHSAAN) ಮಸೀದಿಯ ಇಮಾಮ್ ಮೌಲಾನಾ ಅಲ್ತಾಫ್ ಹೊಸಮನೆಯ ಕೈ ಕೀಲಿಯನ್ನು ಹಸ್ತಾಂತರಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಬೊಲಿ ಪದವು ಜುಮಾ ಮಸೀದಿಯ ಅಧ್ಯಕ್ಷ ರಫೀಕ್, ಬೆಸ್ಟ್ ಪ್ಲೈವುಡ್ ಮಾಲಕ ಅಶ್ರಫ್, ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಎಚ್ಎಫ್ ಇಂಡಿಯಾ ಅಧ್ಯಕ್ಷ ನಾಜಿಮ್ ಏಕೆ ಸಂಸ್ಥೆಯ ಕುರಿತು ಮಾತನಾಡಿ ನೆಲ್ಯಾಡಿ ಸಮೀಪ ಆಶಿಯಾನದ 27 ಮತ್ತು 28ನೇ ಮನೆಯ ಕಾಮಗಾರಿ ಪ್ರಗತಿಯಲ್ಲಿದೆ ಅತಿ ಶೀಘ್ರದಲ್ಲಿ ಫಲಾನುಭವಿಗೆ ಮನೆಯನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಆದಿಲ್ ಪರ್ವೇಜ್ ಕಿರಾತ್ ಪಟಿಸಿದರು. ಸಜೀದ್ ಏಕೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ ತಸ್ಲೀಮ್, ಸಾಜಿದ್ ಸೌದಿ, ಸಿರಾಜ್ ಸಜಿಪ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.