(www.vknews.in) ಅಂತಾರಾಷ್ಟ್ರೀಯ ಖ್ಯಾತಿಯ ನಟಿ ಮತ್ತು ಸ್ಟೈಲ್ ಐಕಾನ್ ದೀಪಿಕಾ ಪಡುಕೋಣೆ ಅವರು ವಿದೇಶಗಳಲ್ಲಿ ವಹಿವಾಟು ವಿಸ್ತರಿಸುವ ಪಾಟರಿ ಬರ್ನ್ ಕಂಪನಿಯ ಆಕಾಂಕ್ಷೆಗೆ ಸಹಯೋಗ ನೀಡಲಿದ್ದಾರೆ. ವಿಶ್ವದ ಅತಿದೊಡ್ಡ ಡಿಜಿಟಲ್ ಫಸ್ಟ್, ಅತ್ಯುತ್ತಮ ವಿನ್ಯಾಸಕ್ಕೆ ಖ್ಯಾತಿ ಪಡೆದ ಸುಸ್ಥಿರ ಗೃಹೋಪಯೋಗಿ ವಸ್ತುಗಳ ರೀಟೇಲರ್ ಪಾಟರಿ ಬರ್ನ್ ಸೆಲೆಬ್ರಿಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಜಾಗತಿಕ ಸಹಯೋಗ ಘೋಷಿಸಿದೆ. ಪಾಟರಿ ಬರ್ನ್ ಎನ್ನುವುದು ವಿಲಿಯಮ್ಸ್-ಸೊನೊಮಾ (NYSE: WSM) ಸಮೂಹದ ಒಂದು ಪೋರ್ಟ್ಫೋಲಿಯೊ ಬ್ರ್ಯಾಂಡ್ ಆಗಿದೆ.
ಜುಲೈ ತಿಂಗಳಲ್ಲಿ ಕಂಪನಿಯ ವೆಬ್ ಸೈಟ್ potterybarn.in ನೊಂದಿಗೆ ಭಾರತದಲ್ಲಿ ಪ್ರಾರಂಭವಾಗಿದ್ದು. ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಕಂಪನಿಯ ಮೊದಲ ರೀಟೇಲ್ ಮಳಿಗೆಯನ್ನು ದೆಹಲಿಯಲ್ಲಿ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ನ ಸಹಭಾಗಿತ್ವದಲ್ಲಿ ತೆರೆಯಿತು. ಜನಪ್ರಿಯ ನಟಿ, ಉದ್ಯಮಿ ಮತ್ತು ದಾನಿ ದೀಪಿಕಾ ಪಡುಕೋಣೆ ಅವರು ಕಂಪನಿಯ ಬ್ರಾಂಡ್ ಅಂಬಾಸಡರ್ ಆಗಿ ಪಾಟರಿ ಬರ್ನ್ ಉತ್ಪನ್ನಗಳ ಪ್ರಚಾರಕ್ಕೆ ನೆರವಾಗಲಿದ್ದಾರೆ. ಈ ಬ್ರ್ಯಾಂಡ್ ಸಹಯೋಗದಲ್ಲಿ ಪ್ರತ್ಯೇಕ ಕಲೆಕ್ಷನ್ ಒಂದನ್ನು ದೀಪಿಕಾ ರೂಪಿಸಲಿದ್ದಾರೆ.
“ಒಳಾಂಗಣ ವಿನ್ಯಾಸ ನನ್ನ ಆಸಕ್ತಿಯ ಕ್ಷೇತ್ರ ಎಂಬುದು ಗುಟ್ಟಾಗಿ ಉಳಿದಿಲ್ಲ. ಸ್ಥಳಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇನೆ. ಹೀಗಾಗಿಯೇ ಜಾಗತಿಕವಾಗಿ ಮುಂಚೂಣಿಯಲ್ಲಿ ಇರುವ ಗೃಹೋಪಯೋಗಿ ವಸ್ತುಗಳ ನಿರ್ಮಾಣ ಕಂಪನಿಯ ಸಹಯೋಗ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಸಾರ್ವಕಾಲಿಕ ಎನಿಸುವಂಥ ಉತ್ಪನ್ನಗಳನ್ನು ರೂಪಿಸಲು ಕಾತರದಿಂದ ನಿರೀಕ್ಷಿಸುತ್ತಿದ್ದೇನೆ,” ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಗೃಹೋಪಕರಣಗಳ ಉದ್ಯಮದಲ್ಲಿ ಜಾಗತಿಕ ನಾಯಕರಾಗಿ, ಪಾಟರಿ ಬಾರ್ನ್ ಸುಸ್ಥಿರತೆ, ಸೇವೆ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದಕ್ಕಾಗಿ ಹೆಸರುವಾಸಿ. ಕಾಡುಗಳ ಪ್ರಮಾಣ ವೃದ್ಧಿ ಆಗಲು ಸಹಾಯ ಮಾಡುವುದರಿಂದ ಹಿಡಿದು ಆರೋಗ್ಯಕರ ಮನೆಗಳನ್ನು ರಚಿಸುವವರೆಗೆ, ಮನೆ ಮತ್ತು ಅದರಾಚೆಗೆ ವ್ಯತ್ಯಾಸ ಮಾಡುವ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಉದ್ದೇಶ ಹೊಂದಿದೆ.
ಪಾಟರಿ ಬಾರ್ನ್ ಗ್ರಾಹಕರಿಗೆ ಒಳಾಂಗಣ ವಿನ್ಯಾಸ ತಜ್ಞರ ಮೀಸಲಾದ ತಂಡವನ್ನು ಒಳಗೊಂಡಿರುವ ಪೂರಕ ವಿನ್ಯಾಸ ಸಿಬ್ಬಂದಿ ಸೇವೆಗಳನ್ನು ನೀಡುತ್ತದೆ. ವಿನ್ಯಾಸಗಳ ಶೈಲಿಯ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡುತ್ತದೆ ಮತ್ತು ಗ್ರಾಹಕರು ತಮ್ಮ ಮನೆ ಯೋಜನೆಗಳಿಗೆ ವಾಸ್ತವಿಕವಾಗಿ, ಅಂಗಡಿಯಲ್ಲಿ ಅಥವಾ ಮನೆಯಲ್ಲಿಯೇ ವರ್ಚುವಲ್ ವಿಧಾನದಲ್ಲಿ ನೇರಾ- ನೇರ ಚರ್ಚಿಸಿ, ವಿನ್ಯಾಸದ ಮೂಲಕ ಜೀವ ತರಲು ಸಹಾಯ ಮಾಡುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.