(www.vknews.in) ವಾಷಿಂಗ್ಟನ್ / ಮುಂಬೈ, ಡಿಸೆಂಬರ್ 13: ಭಾರತದಲ್ಲಿ ಸಾಮಾಜಿಕ ಬದಲಾವಣೆಗೆ ಚಾಲನೆ ನೀಡುವ, ಸಕ್ರಿಯಗೊಳಿಸುವ ಮತ್ತು ಸುಗಮಗೊಳಿಸುವ ನಾಯಕಿಯರು ಫೆಲೋಶಿಪ್ ಮತ್ತು ಬಲವಾದ ಬೆಂಬಲ ವ್ಯವಸ್ಥೆಯೊಂದಿಗೆ ತಮ್ಮ ಸಾಮರ್ಥ್ಯ ಬಲಪಡಿಸುವ ಹೊಸ ಉಪಕ್ರಮದ ಭಾಗ ಆಗುತ್ತಾರೆ. ರಿಲಯನ್ಸ್ ಫೌಂಡೇಷನ್ ಮತ್ತು ವೈಟಲ್ ವಾಯ್ಸ್ ಗ್ಲೋಬಲ್ ಸಹಭಾಗಿತ್ವದ ಜಂಟಿ ಉಪಕ್ರಮದ ಉದ್ಘಾಟನಾ ವುಮೆನ್ಲೀಡ್ ಇಂಡಿಯಾ ಫೆಲೋಶಿಪ್ಗಾಗಿ ಭಾರತದ ಸಾಮಾಜಿಕ ವಲಯದಿಂದ ಐವತ್ತು ಸ್ಪೂರ್ತಿದಾಯಕ ಮಹಿಳೆಯರನ್ನು ಗುರುತಿಸಲಾಗಿದೆ.
ಭಾರತದಲ್ಲಿ ಮಹಿಳಾ ನಾಯಕತ್ವಕ್ಕಾಗಿ ಮಹತ್ವಾಕಾಂಕ್ಷೆಯ ತುರ್ತು ಕಾರ್ಯಸೂಚಿಗೆ ಚಾಲನೆ ನೀಡುತ್ತಾ, ಫೆಲೋಶಿಪ್ ಬದಲಾವಣೆ ಸೂಚಕರು, ಸಾಮಾಜಿಕ ಉದ್ಯಮಿಗಳು ಮತ್ತು ಸಾಮಾಜಿಕ ವಲಯದ ನಾಯಕರಲ್ಲಿ ಹೂಡಿಕೆ ಮಾಡುತ್ತದೆ. ಅವರ ಸಾಮಾಜಿಕ ಉಪಕ್ರಮಗಳನ್ನು ಅರ್ಥಪೂರ್ಣವಾಗಿ ಬೆಳೆಸಲು ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಬೆಂಬಲ ವ್ಯವಸ್ಥೆ (ಸಪೋರ್ಟ್ ಸಿಸ್ಟಮ್) ಹೊಂದಿದೆ.
ಶಿಕ್ಷಣ, ಗ್ರಾಮೀಣ ಪರಿವರ್ತನೆ, ಅಭಿವೃದ್ಧಿಗಾಗಿ ಕ್ರೀಡೆಗಳು ಮತ್ತು ಕಲೆಗಳು, ಸಂಸ್ಕೃತಿ ಮತ್ತು ಪರಂಪರೆಯ ವಿಷಯಗಳಲ್ಲಿ ಅವರ ಕೆಲಸಕ್ಕಾಗಿ ಉದ್ಘಾಟನಾ ಸಮೂಹದಲ್ಲಿ ಫೆಲೋಗಳನ್ನು ಆಯ್ಕೆ ಮಾಡಲಾಗಿದೆ. ಈ ಡೈನಾಮಿಕ್ ಮತ್ತು ಇಂಟರ್ಜನರೇಷನ್ ಸಮೂಹವು ವಿವಿಧ ಸಾಮಾಜಿಕ ವಲಯದ ಸಂಸ್ಥೆಗಳಿಂದ ಬಂದಿದ್ದು, ದೇಶದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುತ್ತದೆ. ಫೆಲೋಗಳು ದಕ್ಷಿಣ ಕರಾವಳಿಯ ಹಳ್ಳಿಗಳಲ್ಲಿನ ತ್ಯಾಜ್ಯ ನಿರ್ವಹಣೆಯಿಂದ ಈಶಾನ್ಯ ಭಾರತದಲ್ಲಿ ಕೈಗೆಟುಕುವ ಇಂಧನ ಮೂಲಗಳವರೆಗೆ ಹಲವಾರು ಸಮಸ್ಯೆಗಳು ಮತ್ತು ಭೌಗೋಳಿಕತೆಗಳಲ್ಲಿ ಕೆಲಸ ಮಾಡುವ ಉದ್ಯಮಿಗಳನ್ನು ಒಳಗೊಂಡಿರುತ್ತವೆ.
10 ತಿಂಗಳ ಅವಧಿಯಲ್ಲಿ ಫೆಲೋಶಿಪ್ ಈ ನಾಯಕಿಯರಿಗೆ ಕೋರ್ಸ್ ಪಠ್ಯಕ್ರಮವನ್ನು ಒದಗಿಸುತ್ತದೆ, ಜಾಗತಿಕ ನಾಯಕರು ಮತ್ತು ಪ್ರಭಾವಶಾಲಿಗಳ ಜಾಲಕ್ಕೆ ಸಂಪರ್ಕ ಮತ್ತು ಅವರ ಜ್ಞಾನ ಹಾಗೂ ಕೌಶಲಗಳನ್ನು ಹೆಚ್ಚಿಸಲು ಸಹಾಯ ಮಾಡುವ ಮೇಲ್ಸ್ತರದ ಮಾರ್ಗದರ್ಶನ ಬೆಂಬಲವನ್ನು ಒದಗಿಸುತ್ತದೆ – ಹೆಚ್ಚಿನ ಸಮುದಾಯ ಪರಿಣಾಮವನ್ನು ಸಾಧಿಸಲು ಎಲ್ಲ ಅಗತ್ಯಗಳು ಪೂರೈಸಲಾಗುತ್ತದೆ.
ಫೆಲೋಶಿಪ್ ಕುರಿತು ಮಾತನಾಡಿದ ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ, “ಮೊದಲ ವುಮೆನ್ ಲೀಡ್ ಇಂಡಿಯಾ ಫೆಲೋಶಿಪ್ಗೆ ಆಯ್ಕೆಯಾದ 50 ಮಾದರಿ ಮಹಿಳೆಯರಿಗೆ ನನ್ನ ಅಭಿನಂದನೆಗಳು. ಅವರ ಸ್ಫೂರ್ತಿದಾಯಕ ಪ್ರಯಾಣಗಳು ಮತ್ತು ಪರಿವರ್ತನೆ ದೃಷ್ಟಿಯ ಬಗ್ಗೆ ತಿಳಿದುಕೊಳ್ಳಲು ಸಂತೋಷವಾಗಿದೆ. ಈ ಫೆಲೋಶಿಪ್ ಭಾರತದಾದ್ಯಂತ ಸಮುದಾಯಗಳೊಂದಿಗೆ ಅವರ ಮಹೋನ್ನತ ಕೆಲಸವನ್ನು ಮತ್ತಷ್ಟು ಬಲಪಡಿಸುವ ಹಾಗೂ ಹೆಚ್ಚಿಸುವ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ವುಮೆನ್ಲೀಡ್ ಇಂಡಿಯಾ ಫೆಲೋಗಳನ್ನು ಬೆಂಬಲಿಸಲು ಮತ್ತು ಅವರ ಯಶೋಗಾಥೆಯ ಭಾಗವಾಗಲು ಈ ಅದ್ಭುತ ಉಪಕ್ರಮದಲ್ಲಿ ರಿಲಯನ್ಸ್ ಫೌಂಡೇಷನ್ ಜತೆಗೆ ವಿಶೇಷವಾಗಿ ವೈಟಲ್ ವಾಯ್ಸ್ ಪಾಲುದಾರ ಆಗಿದೆ,” ಎಂದಿದ್ದಾರೆ.
“ಈ 50 ನಾಯಕಿಯರನ್ನು ನಾನು ಶ್ಲಾಘಿಸುತ್ತೇನೆ, ಜನರು ತಮ್ಮ ಸಮುದಾಯಗಳಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಮುಂದಿಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ವುಮೆನ್ಲೀಡ್ ಇಂಡಿಯಾ ಫೆಲೋಶಿಪ್ ಏನೆಂಬುದರ ಬಗ್ಗೆ ಅವರು ಉಜ್ವಲ ಉದಾಹರಣೆ ಆಗಿದ್ದಾರೆ ಮತ್ತು ವೈಟಲ್ ವಾಯ್ಸ್ ಅವರ ಪ್ರಯಾಣದ ಒಂದು ಭಾಗವಾಗಿದೆ ಎಂದು ನಾನು ಹೆಮ್ಮೆಪಡಲು ಸಾಧ್ಯವಿಲ್ಲ. ಫೆಲೋಗಳ ಈ ಉದ್ಘಾಟನಾ ಸಮೂಹದಲ್ಲಿ ದೀರ್ಘಾವಧಿಯ ಹೂಡಿಕೆಯನ್ನು ಮಾಡುವಲ್ಲಿ ನಾವು ಉತ್ಸುಕರಾಗಿದ್ದೇವೆ, ಅವರು ಇತರ ಲಕ್ಷಾಂತರ ಮಂದಿಯನ್ನು ಸಬಲೀಕರಣಗೊಳಿಸಲು ತಮ್ಮ ಶಕ್ತಿಯನ್ನು ಬಳಸುತ್ತಾರೆ ಎಂದು ನಾವು ನಂಬುತ್ತೇವೆ,” ಎಂದು ವೈಟಲ್ ವಾಯ್ಸ್ನ ಅಧ್ಯಕ್ಷರು ಮತ್ತು ಸಿಇಒ ಸಹ-ಸಂಸ್ಥಾಪಕರಾದ ಅಲಿಸ್ ನೆಲ್ಸನ್ ಹೇಳಿದ್ದಾರೆ.
ಇನ್ನೂ ಮುಂದುವರಿದು, “ಭಾರತದ ಮುಂದಿನ ಪೀಳಿಗೆಯ ನಾಯಕಿಯರನ್ನು ಈ ಗೌರವಾನ್ವಿತ ಫೆಲೋಶಿಪ್ಗೆ ಸ್ವಾಗತಿಸಲು ರಿಲಯನ್ಸ್ ಫೌಂಡೇಷನ್ನೊಂದಿಗೆ ಪಾಲುದಾರರಾಗಲು ನಾವು ರೋಮಾಂಚನಗೊಂಡಿದ್ದೇವೆ,” ಎಂದಿದ್ದಾರ.
ವುಮೆನ್ಲೀಡ್ ಇಂಡಿಯಾ ಫೆಲೋಶಿಪ್ ಭಾಗವಹಿಸುವ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ. ಫೆಲೋಗಳಿಗೆ ಸಾಮಾನ್ಯ ಮತ್ತು ಥೀಮ್-ಕೇಂದ್ರಿತ ಮಾರ್ಗದರ್ಶನ ಒದಗಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ವೈವಿಧ್ಯಮಯ ವಿಷಯಾಧಾರಿತ ಕ್ಷೇತ್ರಗಳಲ್ಲಿ ಸಂಪರ್ಕ ಸಾಧಿಸಲು ಇದು ವೇದಿಕೆಯಾಗಿ (ಪ್ಲಾಟ್ಫಾರ್ಮ್) ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಬಹುಪಕ್ಷೀಯ ಮತ್ತು ಅಂತರ್ಶಿಸ್ತೀಯ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಅವರು ಭಾರತೀಯ ಮತ್ತು ಜಾಗತಿಕ ಅನುಭವಗಳಿಂದ ಪರಸ್ಪರ ಕಲಿಯಬಹುದು. ವುಮೆನ್ ಲೀಡ್ ಇಂಡಿಯಾ ಫೆಲೋಶಿಪ್ ಮಹಿಳಾ ನಾಯಕತ್ವದ ಮೂಲಕ ಭಾರತದ ಅಭಿವೃದ್ಧಿ ವಲಯದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.