(www.vknews.in) ಇತ್ತೀಚಿನ ದಿನಗಳಲ್ಲಿ, ಜನರು ಗೂಗಲ್ನಲ್ಲಿ ತಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯನ್ನು ಹುಡುಕು ಮೂಲಕ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾರೆ ಆದರೆ ಗೂಗಲ್ನಲ್ಲಿ ಎಲ್ಲವನ್ನು ಹುಡುಕಿದರೆ ಕೆಲವು ಸಂಗತಿಗಳು ಮೂಲಕ ನಿಮ್ಮನ್ನು ಜೈಲಿಗೆ ಕಳುಹಿಸುವ ಕೆಲವು ವಿಷಯಗಳಿವೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ.
ಬಾಂಬ್ ತಯಾರಿಸುವುದು ಹೇಗೆ: ತಪ್ಪಾಗಿ ಅಥವಾ ತಮಾಷೆಗಾಗಿ ಗೂಗಲ್ ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ನೋಡಲು ನೀವು ಪ್ರಯತ್ನಿಸಿದರೆ, ನೀವು ಜೈಲಿಗೆ ಹೋಗಬೇಕಾಗಬಹುದು.
ಅತ್ಯಾಚಾರ ಸಂತ್ರಸ್ಥರ ಹೆಸರು: ನೀವು ಅತ್ಯಾಚಾರ ಸಂತ್ರಸ್ಥರ ಹೆಸರು ವಿವರಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದರೆ, ಇದು ತುಂಬಾ ಸೂಕ್ಷ್ಮ ಹಾಗೆ ಮಾಡಿದ್ದಕ್ಕಾಗಿ ನಿಮ್ಮನ್ನು ಜೈಲಿಗೆ ಹಾಕಬಹುದು.
ಚೈಲ್ಡ್ ಪೋರ್ನ್: ಚೈಲ್ಡ್ ಪೋರ್ನ್ ಬಹಳ ಸೂಕ್ಷ್ಮ ವಿಷಯವಾಗಿದೆ ಮತ್ತು ಅದನ್ನು ಗೂಗಲ್ ನಲ್ಲಿ ಹುಡುಕುವುದು ತುಂಬಾ ಅಪಾಯಕಾರಿಯಾಗಿದೆ ಹಾಗೂ ಕಾನೂನು ಬಾಹಿರ ಕೃತ್ಯ , ಚೈಲ್ಡ್ ಪೋರ್ನ್ ಎಂದು ಸರ್ಚ್ ಮಾಡಿದರೆ, ನೀವು ಪೋಸ್ಕೋ ಕಾಯ್ದೆ 2012 ರ ಕಲಂ 14 ರ ಅಡಿಯಲ್ಲಿ ಜೈಲಿಗೆ ಹೋಗಬೇಕಾಗಬಹುದು. ಈ ಕೃತ್ಯ ಎಸಗಿದರೆ 5 ವರ್ಷಕ್ಕೆ ಕಡಿಮೆಯಲ್ಲದ , 7 ವರ್ಷದವರೆಗೂ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.
– ಮರಿಗೌಡ ಬಾದರದಿನ್ನಿ ವಕೀಲರು & ಬರಹಗಾರರು ,ಕುಷ್ಟಗಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.