(www.vknews.in) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕಾನತಡ್ಕದಲ್ಲಿ ಇಂದು (ದಿನಾಂಕ 24.01.2023 ಮಂಗಳವಾರ) ಮಹಾತ್ಮ ಗಾಂಧಿಯವರ ಚಿತ್ರ ಪ್ರದರ್ಶನ
‘ಶಾಲಾ ಮಕ್ಕಳು ಚೆನ್ನಾಗಿ ಕಲಿತು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ನಮ್ಮ ಶಾಲೆಯಲ್ಲಿ ಪರಿಣತ ಬೋಧಕ ವರ್ಗವಿದೆ. ಹಾಗೂ ಎಲ್ಲರ ಪ್ರೋತ್ಸಾಹವೂ ಬಹಳವಿದೆ. ಈ ವಿದ್ಯಮಾನವನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿಯವರ ಆದರ್ಶವನ್ನು ಪರಿ ಪಾಲಿಸಬೇಕು’ ಎಂದು ಶ್ರೀಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾನತ್ತಡ್ಕ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಮಹಮ್ಮದ್ ಹುಸೈನ್ ವೈದ್ಯರ್ ಕರೆ ನೀಡಿದರು. ಇವರು ವಿದ್ಯಾ ಸಂಸ್ಥೆಯಲ್ಲಿ ‘ಗಾಂಧಿ ಸ್ಮರಣೆ ಪಕ್ಷಾಚರಣೆ’ ಕಾರ್ಯಕ್ರಮದ ಒಂಬತ್ತನೇಯ ದಿನವಾದ ಇಂದು ಶಾಲೆಯಲ್ಲಿ ಪ್ರದರ್ಶನಕ್ಕೆ ಇಟ್ಟ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ನೆರವೇರಿಸಿ ಶುಭ ಕೋರಿದರು.
ಶಾಲಾ ಶಿಕ್ಷಕಿ ದಿವ್ಯಶ್ರೀ ಸ್ವಾಗತಿಸಿದರ ಹಾಗೂ ಇನ್ನೋರ್ವ ಶಿಕ್ಷಕಿ ಆಯಿಷ ವಂದನಾರ್ಪಣೆಗೈದರು. ಶಾಲಾ ಮುಖ್ಯಶಿಕ್ಷಕರಾದ ಕಾನ ವಿಶ್ವನಾಥ ಭಟ್ಟರು ಈ ಕಾರ್ಯಕ್ರಮವನ್ನು ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.