ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದ ಯಂ ಏ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಿಗಳು ಶುಕ್ರವಾರ ಜುಮಾ ನಮಾಜಿಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಕಳ್ಳನು ಶಟ್ಟರ್ ಓಪನ್ ಮಾಡಿ ಡ್ರಾವರ್ ಒಡೆದು ಕ್ಯಾಶ್ ಡ್ರಾವರ್ ನಲ್ಲಿದ್ದ ಸುಮಾರು 40,000/- ಹಣವನ್ನು ಕದ್ದು ಪರಾರಿಯಾಗಿದ್ದಾನೆ. ಸಿಸಿ ಕ್ಯಾಮೆರಾ ಪರಿಶೀಸಲಿಸಿದಾಗ ಅನ್ಸಾರ್ ಯಾನೆ ಬೋಡ್ಡ ಅಂಚ ಬೆಂಗರೇ ಕಳ್ಳತನ ಮಾಡುವ ದೃಶ್ಯ ಕಂಡುಬಂದಿದೆ. ಈತ ಈಗ ಅಮೆಮ್ಮರ್ ನಲ್ಲಿ ಪತ್ನಿ ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ್ದಾನೆ.
ಬಂದರ್ ಪರಿಸರದಲ್ಲಿ ಹಲವಾರು ಕಳ್ಳತನವಾಗಿದೆ , ಬೈಕ್ ಕಳವು, ಸ್ಕೂಟರ್ ನ ಸೀಟು ಒಡೆದು ಕ್ಯಾಶ್ ತೆಗೆದು ಹೋದ ಬಗ್ಗೆಯೂ ಕಂಪ್ಲೈಂಟ್ ಆಗಿದೆ, ಅಂಗಡಿ ತೆರೆದ ಸಮಯದಲ್ಲಿ ಬೆಲೆಬಾಳುವ ಮಷೀನ್ ಕದ್ದ ಬಗ್ಗೆಯೂ ಕಂಪ್ಲೈಂಟ್ ಆಗಿವೆ, ಹಾಗಾಗಿ ಈ ಹಗಲಿನ ಸಮಯದಲ್ಲೂ ರಾಜಾರೋಷವಾಗಿ ಕಳ್ಳತನ ಮಾಡುವ ಈತನನ್ನು ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೇ ಮಾಡಿ, ಬೇರೆ ಎಲ್ಲೆಲ್ಲಾ ಕಳ್ಳತನದಲ್ಲಿ ಈತ ಬಾಗಿಯಾಗಿದ್ದಾನೆ ಎಂದೂ ತನಿಖೆ ನಡೆಸಬೇಕು ಎಂದು ಯಂ ಏ ಎಂಟರ್ ಪ್ರೈಸಸ್ ಮಾಲಕರು ದೂರು ನೀಡಿದ್ದಾರೆ. ಈತನನ್ನು ಬಂಧನ ಮಾಡಿ ಪೊಲೀಸ್ ಭಾಷೆಯಲ್ಲಿ ಟ್ರೀಟ್ ಮೇಂಟ್ ಮಾಡಿದರೆ ಯಾವುದೆಲ್ಲ ಕಳ್ಳತನದಲ್ಲಿ ಬಾಗಿಯಾಗಿದ್ದಾನೆ ಎಂದೂ ತಿಳಿಯಬಹುದು. ಬಂದರ್ ಪ್ರದೇಶದಲ್ಲಿ ಇಂತಹ ಕಳ್ಳತನ ನಿರಂತರ ನಡೆಯುತ್ತಿದ್ದು ಮಾನ್ಯ ಪೊಲೀಸರು ಇದರ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.