ಕುವೈತ್ ಸಿಟಿ (ವಿಶ್ವ ಕನ್ನಡಿಗ ನ್ಯೂಸ್) : ಕುವೈತ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅನಿವಾಸಿ ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಲುಲು ಎಕ್ಸ್ಚೇಂಜ್ ಸೆಂಟರ್ನ ಕಸ್ಟಮರ್ ಕೇರ್ ಮ್ಯಾನೇಜರ್ ಅನು ಅಬೆಲ್ (34) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಅವರು ಶನಿವಾರ ಬಸ್ ಹತ್ತಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ.
ಫರ್ವಾನಿಯಾ ದಜೀಜ್ನ ಲುಲು ಸೆಂಟರ್ನಲ್ಲಿ ಕೆಲಸದಿಂದ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅನು ಫರ್ವಾನಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.
ಇವರು ಕೊಟ್ಟಾರಕ್ಕರ ಈಸ್ಟ್ ಸ್ಟ್ರೀಟ್ ನ ಥಾಲಿಕಮ್ವಿಲಾ ಹೌಸ್ ನ ಕೆ ಅಲೆಕ್ಸ್ ಕುಟ್ಟಿ ಮತ್ತು ಜಾಲಿಕುಟ್ಟಿ ಅಲೆಕ್ಸ್ ಅವರ ಪುತ್ರಿ. ಪತಿ: ಅಬೆಲ್ ರಾಜನ್. ಮಗ: ಹರೋನ್ ಅಬೆಲ್. ಸಹೋದರಿ: ಅಂಜು ಬಿಜು ಕುವೈತ್ ನಲ್ಲಿ ನರ್ಸ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.