ಹೊಸದಿಲ್ಲಿ (ವಿಶ್ವ ಕನ್ನಡಿಗ ನ್ಯೂಸ್) : ಟೆಲಿವಿಷನ್ ಪ್ಯಾನೆಲ್ಗಳ ಮೇಲಿನ ಸುಂಕವನ್ನು ಕಡಿತಗೊಳಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಘೋಷಿಸಿರುವುದರಿಂದ ದೂರದರ್ಶನ ಸೆಟ್ಗಳ ಬೆಲೆ ಇಳಿಕೆಯಾಗಲಿದೆ. ಟೆಲಿವಿಷನ್ ಪ್ಯಾನೆಲ್ಗಳ ಮೇಲಿನ ಸುಂಕವನ್ನು ಶೇಕಡಾ 2.5 ರಷ್ಟು ಕಡಿಮೆ ಮಾಡಲಾಗುವುದು.
ಮೊಬೈಲ್ ನಿರ್ಮಾಣ ಸಾಮಗ್ರಿಗಳ ಮೇಲಿನ ಸುಂಕ ಕಡಿತ. ಇದರಿಂದ ಮೊಬೈಲ್ ಫೋನ್ಗಳ ಬೆಲೆ ಕಡಿಮೆಯಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಬೆಲೆ ಕಡಿಮೆಯಾಗುತ್ತದೆ. ಎಲೆಕ್ಟ್ರಿಕ್ ಕಿಚನ್ ಮತ್ತು ಹೀಟ್ ಕಾಯಿಲ್ ವೆಚ್ಚ ಕಡಿಮೆಯಾಗುತ್ತದೆ. ಕ್ಯಾಮರಾ ಲೆನ್ಸ್ ಮೇಲಿನ ಕಸ್ಟಮ್ಸ್ ಸುಂಕ ಕಡಿತ ಮಾಡಲಾಗಿದೆ. ಸಿಗರೇಟ್, ಚಿನ್ನ, ಬೆಳ್ಳಿ ಮತ್ತು ವಜ್ರದ ಬೆಲೆಗಳು ಹೆಚ್ಚಾಗುತ್ತವೆ. ರಬ್ಬರ್ ಕಾಂಪೌಂಡ್ ಮಾಡುವ ಸುಂಕವನ್ನು ಹೆಚ್ಚಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.