ಮಲಪ್ಪುರಂ (ವಿಶ್ವ ಕನ್ನಡಿಗ ನ್ಯೂಸ್) : ಮಲಪ್ಪುರಂ ನೂರಟಿಕಡವ್ ಬಳಿ ಸ್ನಾನಕ್ಕೆ ಇಳಿದ ತಾಯಿ ಮತ್ತು ಮಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೈಲಾಪುರದ ಫಾತಿಮಾ ಫೈಜಾ (30) ಮತ್ತು ಅವರ ಪುತ್ರಿ ಫಿದಾ ಫಾತಿಮಾ (7) ಮೃತರು. ಶುಕ್ರವಾರ ವಿಐಪಿ ಕಾಲೋನಿಕಾಡು ಎಂಬಲ್ಲಿ ಅಪಘಾತ ಸಂಭವಿಸಿದೆ.
ಅವರು ನೆರೆಹೊರೆಯವರೊಂದಿಗೆ ಸ್ನಾನಕ್ಕೆ ಬಂದಿದ್ದರು. ಈ ನಡುವೆ ಮಗಳು ನೀರಿಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಮುಂದಾದಾಗ ತಾಯಿಯೂ ಅಪಘಾತಕ್ಕೀಡಾಗಿದ್ದಾರೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.