ಕಾವು (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ಕರಾವಳಿಯ ಶೈಕ್ಷಣಿಕ ಕ್ರಾಂತಿಯ ಹೆಜ್ಜೆಯನ್ನಿಟ್ಟ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ವಾರ್ಷಿಕ ಮಹಾಸಮ್ಮೇಳನ ಹಾಗೂ ಮಜ್ಲಿಸುನ್ನೂರ್ ಸಿಂಸಾರುಲ್ ಹಖ್ ಹುದವಿ ಪ್ರಭಾಷಣ ದಿನಾಂಕ 2023 ಮಾರ್ಚ್ 4ನೇ ಶನಿವಾರ ಶಹೀದಿಯ್ಯ ನಗರದ ಅಕಾಡೆಮಿ ಮೈದಾನದಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಿದ ವೇದಿಕೆಯಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಮಾಡನ್ನೂರಿನಲ್ಲಿ ಸುಮಾರು ಎಂಟು ವರ್ಷಗಳಿಂದ ಸಮನ್ವಯ ಶಿಕ್ಷಣ ನೀಡುತ್ತಿರುವ ಪ್ರಸ್ತುತ ಸಂಸ್ಥೆಯು ಕೇರಳದ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿದೆ. ಇದೀಗಾಗಲೇ ಹಲವಾರು ಗುಣಮಟ್ಟದ ಪ್ರಶಸ್ತಿಗಳಿಗೆ ಪಾತ್ರವಾಗಿದ್ದು, ಕೊನೆಯಲ್ಲಿ 2022ರ ಸಿಬಾಖ್ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿದೆ.
ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ವಿಜಯಕಂಡ ಸಂಸ್ಥೆಯು ಇದೀಗ ವಾರ್ಷಿಕ ಮಹಾ ಸಮ್ಮೇಳನದ ಹೊಸ್ತಿಲಲ್ಲಿದೆ. ಇದೇ ಬರುವ ಮಾರ್ಚ್ 2023 04 ಶನಿವಾರ ಸಂಜೆ 6:30ಕ್ಕೆ ಸರಿಯಾಗಿ ಶುಹದಾ ಮುಖಾಂ ಝಿಯಾರತ್ ನಡೆಯಲಿದ್ದು, ಸಯ್ಯಿದ್ ಬುರ್ಹಾನ್ ಅಲಿ ತಂಗಲ್ ಅಲ್ ಬುಖಾರಿ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.
ನಂತರ ನಡೆಯುವ ಮಜ್ಲಿಸುನ್ನೂರ್ ಆತ್ಮೀಯ ಸಂಗಮದಲ್ಲಿ ಸೈಯ್ಯಿದ್ ಅಹಮದ್ ಪೂಕೋಯ ತಂಗಳ್ ಪುತ್ತೂರು, ಸಮಸ್ತ ಉಲಮಾ ಒಕ್ಕೂಟದ ಸದಸ್ಯರಾದ ಉಸ್ತಾದ್ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ತಾದ್ ಉಸ್ಮಾನುಲ್ ಫೈಝಿ, ಸೈಯ್ಯಿದ್ ಅಮೀರ್ ತಂಗಳ್ ಕಿನ್ಯ, ಸೈಯ್ಯಿದ್ ಬಾತಿಷಾ ತಂಗಳ್, ಮಿತ್ತಬೈಲು ಉಸ್ತಾದ್ ಸುಪುತ್ರ ಇರ್ಷಾದ್ ದಾರಿಮಿ, ಸೈಯ್ಯಿದ್ ಬಾ ಅಲವಿ ತಂಗಳ್ ಕುಕ್ಕಾಜೆ, ಸೈಯ್ಯಿದ್ ಅನಸ್ ತಂಗಳ್ ಗಂಡಿಬಾಗಿಲು ಸೈಯ್ಯಿದ್ ಹುಸ್ಸೈನ್ ತಂಗಳ್ ಜಿಫ್ರಿ ತಂಗಳ್, ಸೈಯ್ಯಿದ್ ತಾಹಾ ತಂಗಳ್ ಬೆಳ್ತಂಗಡಿ, ಸೈಯ್ಯಿದ್ ಸಾಲ್ಮರ ತಂಗಳ್ , ಸೈಯ್ಯಿದ್ ಅಕ್ರಂ ಅಲಿ ತಂಗಳ್, ಸೈಯ್ಯಿದ್ ಹಬೀರ್ರಹ್ಮಾನ್ ತಂಗಳ್, ಮಾಡನ್ನೂರ್ ಸಿರಾಜುದ್ದೀನ್ ಫೈಝಿ ನೇತೃತ್ವ ನೀಡಲಿದ್ದಾರೆ.
ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಲಿರುವ ಮಹಾಸಮ್ಮೇಳನವನ್ನು ಗೌರಾವಾದ್ಯಕ್ಷರಾದ ಸೈಯ್ಯಿದ್ ಕೆಎಸ್ ಅಲಿ ತಂಗಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಮ್ಯಾನೇಜರ್ ಕೆಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತ ಭಾಷಣ, ಪ್ರಿನ್ಸಿಪಾಲ್ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ ಪ್ರಾಸ್ತಾವಿಕ ಭಾಷಣ, ಅಂತರಾಷ್ಟ್ರೀಯ ಯುವ ವಾಗ್ಮಿ ಬಹು ಸಿಂಸಾರುಲ್ ಹಖ್ ಹುದವಿ ಮುಖ್ಯ ಪ್ರಭಾಷಣಗೈಯಲ್ಲಿದ್ದಾರೆ.
ಜಮಾಅತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ, ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಮಂಗಳ ಅಬೂಬಕ್ಕರ್ ಹಾಜಿ, ಕೋಶಾಧಿಕಾರಿ ಎನ್ ಎಸ್ ಅಬ್ದುಲ್ಲಾ ಹಾಜಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್, ಹಿರಾ ಅಬ್ದುಲ್ ಖಾದರ್ ಹಾಜಿ, ಅಲ್ಲದೇ ಹಲವಾರು ಪ್ರಮುಖ ಸಾದಾತ್ ಉಲೇಮಾ ಉಮರಾ ನಾಯಕರು ಚಿಂತಕರು ರಾಜಕೀಯ ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.