(www.vknews.in) ; ಹೆಣ್ಣು ಗಂಡಿಗೆ ಸಮಾನಳು ಎಂದು ಹೇಳಿ ಅವಳಿಂದ ದುಡಿಸಿಕೊಳ್ಳುವ ಮೂರ್ಖನು ನಾನಲ್ಲ ಹೆಣ್ಣು ಗಂಡಿನ ಸಮಾನಳು ಎಂದು ಹೇಳಿ ಅವಳನ್ನು ಕ್ಲಬ್, ಪಬ್, ಬಾರಿನಲ್ಲಿ ಹತ್ತಿಸುವ ಮೂರ್ಖ ನಾನಲ್ಲ…
ಹೆಣ್ಣು ಗಂಡಿಗೆ ಸಮಾನಳು ಎಂದು ಹೇಳಿ ಅವಳನ್ನು ಅರ್ಧನಗ್ನಳನ್ನಾಗಿ ಮಾಡಿ ತೋರಿಸಿ ಸಂಪಾದಿಸುವ ಮೂರ್ಖತನ ನನಗಿಲ್ಲ… ಹೆಣ್ಣು ಗಂಡಿಗೆ ಸಮಾನಳು ಎಂದು ಹೇಳಿ ಅವಳ ಸಾಮರ್ಥ್ಯಕ್ಕೂ ಮೀರಿದ ಕೆಲಸವನ್ನು ಮಾಡಿಸಿ ಕುಳಿತು ತಿನ್ನುವ ಆಸೆ ನನಗಿಲ್ಲ…
ಹೆಣ್ಣು ಗಂಡಿಗೆ ಸಮಾನಳು ಎಂದು ಹೇಳಿ ಅಲೆದಾಡಿಸಿ ಅರ್ಧ ರಾತ್ರಿಯಲ್ಲಿ ಪರದಾಡಿಸಿ ಕಾಮುಕರಿಗೆ ಭೋಜನ ಮಾಡಿಸುವ ಮೂರ್ಖ ನಾನಲ್ಲ… ಹೆಣ್ಣು ಗಂಡಿಗೆ ಸಮಾನಳು ಎಂದು ಹೇಳಿ ಹೊತ್ತು ಹೆತ್ತು. ಹೆತ್ತು ಹೊತ್ತು ಸಾಕಿ ಸಲಹೂ ಕೆಲಸ ನನ್ನಿಂದ ಸಾಧ್ಯವಿಲ್ಲ…
ಹೆಣ್ಣು ಗಂಡಿಗೆ ಸಮಾನಳಾಗಿದ್ದರೆ ಅವಳ ಸೃಷ್ಟಿಯಲ್ಲಿ ಸಹನೆ ಪ್ರೀತಿ ಮಮತೆ ಕರುಣೆ ಅನುಕಂಪವನ್ನು ದೇವ ಅವಳಲ್ಲಿ ತುಂಬಿ ಬಿಟ್ಟಿದ್ದಾನಲ್ಲ… ಅದರಿಂದಲೇ ಅಲ್ಲವೇ ಭೂಮಿ ಪ್ರಕೃತಿ ನೀರು ಇದನ್ನೆಲ್ಲಾ ಜಗವೆ ಹೆಣ್ಣೆಂದು ಗುರುತಿಸಿದೆಯಲ್ಲ…
ಹೆಣ್ಣನ್ನು ಸಮಾನಳೆಂದು ಕಾಣುತ್ತಿಲ್ಲವೋ ಇಲ್ಲವೋ ಅವಳನ್ನು ಹೆಣ್ಣಾಗಿ ಕಂಡು ಗೌರವಿಸಿದರೆ ಜಗವೇ ಸುಂದರವಲ್ಲವ… ಹೆಣ್ಣಿಗೆ ಪ್ರತ್ಯೇಕತೆ ಇದೆ ಹೆಣ್ಣು ಗಂಡಿನಂತಲ್ಲ ಎಂದೂ ಅರಿತವರೇ ಅವಳಿಗೆ ಪ್ರತ್ಯೇಕ ಸ್ಥಾನಮಾನ ನೀಡುವುದ ಸಹಿಸಲಾಗದೆ ಅವಳನ್ನು ಸಮಾನಳೆಂದು ಬಿಂಬಿಸುತ್ತಿರುವ ಹಾಗೆ ಕಾಣುತ್ತಿದೆಯಲ್ಲ….
— ಮನ್ಸೂರ ಅಹಮದ್ ಕೌಡಳ್ಳಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.