ಮೂಡುಬಿದಿರೆ (ವಿಶ್ವ ಕನ್ನಡಿಗ ನ್ಯೂಸ್) : ಡೆಂಗ್ಯೂ ಜ್ವರದಿಂದಾಗಿ ಬಿಳಿ ರಕ್ತ ಕಣಗಳ ಕುಸಿತ ಉಂಟಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವರು ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಜ್ಯೋತಿನಗರ ನಿವಾಸಿ ಮಿಸ್ರಿಯಾ (17) ಮೃತಪಟ್ಟ ವಿದ್ಯಾರ್ಥಿನಿ.
ಜ್ಯೋತಿನಗರದ ನಿವಾಸಿ, ದುಬೈನಲ್ಲಿ ಉದ್ಯೋಗದಲ್ಲಿರುವ ಮಯ್ಯದ್ದಿ -ರಮ್ಲಾತ್ ದಂಪತಿಯ ದ್ವಿತೀಯ ಪುತ್ರಿ ಮಿಸ್ರಿಯಾ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು. ಕೆಲವು ದಿನಗಳಿಂದ ಆಕೆ ವಿಪರೀತ ಜ್ವರದಿಂದ ಬಳಲುತ್ತಿದ್ದು, ಬಿಳಿ ರಕ್ತ ಕಣಗಳ ಕುಸಿತ ಸಮಸ್ಯೆ ಉಲ್ಬಣಿಸಿ ರವಿವಾರ ರಾತ್ರಿ ನಿಧನ ಹೊಂದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.