ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಕೇರಳದ ಪ್ಲಸ್ ಒನ್ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಚಂಗನಾಶ್ಶೇರಿ ತ್ರಿಕೋಡಿಥಾನಂ ಮೂಲದ ಎಲಂಕುನ್ನತ್ ಹೌಸ್ನಲ್ಲಿ ಅನಿಲ್ ಕುರಿಯಾಕೋಸ್ ಮತ್ತು ಪ್ರಿನ್ಸ್ ಜಾನ್ ದಂಪತಿಯ ಪುತ್ರ ಸ್ಟೀವ್ ಜಾನ್ ಕುರಿಯಾಕೋಸ್ (17) ಮೃತರು. ತಾಯಿ ಪ್ರಿನ್ಸಿ ಶೇಖ್ ಶಕ್ಬೂತ್ ಮೆಡಿಕಲ್ ಸಿಟಿಯಲ್ಲಿ ನರ್ಸ್.
ನೈಟ್ ಡ್ಯೂಟಿ ಮುಗಿಸಿ ಬೆಳಗ್ಗೆ ಬಂದು ಮಲಗಿದ ಪ್ರಿನ್ಸಿ ಮಧ್ಯಾಹ್ನ ಎರಡು ಗಂಟೆಗೆ ಎಚ್ಚರಗೊಂಡು, ಮಗನ ರೂಮಿಗೆ ಹೋಗಿ ನೋಡಿದಾಗ ಮಗ ಮಲಗಿದ್ದ ರೀತಿಯಲ್ಲಿ ಯಾವುದೇ ಚಾಲನೆ ಇಲ್ಲದೆ ಇದ್ದನು. ಕೂಡಲೇ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ.
ಸ್ಟೀವ್ ಅವರ ತಂದೆ ಅನಿಲ್ ಕುರಿಯಾಕೋಸ್ ಮತ್ತು ಸಹೋದರಿ ಸಾಂಡ್ರಾ ಮೇರಿ ಕುರಿಯಾಕೋಸ್ ಅವರು ದೇಶದಲ್ಲಿದ್ದಾರೆ. ಸ್ಟೀವ್ ಜಾನ್ ಕುರಿಯಾಕೋಸ್ ಅಲ್ ವತ್ಬಾ ಇಂಡಿಯನ್ ಸ್ಕೂಲ್ನಲ್ಲಿ ಪ್ಲಸ್ ಒನ್ ವಿದ್ಯಾರ್ಥಿಯಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.