ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್) : ಪಟ್ಟಣದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಶುಕ್ರವಾರ ಪುನೀತ್ ರಾಜಕುಮಾರ್ ಅವರ 48 ನೇ ಹುಟ್ಟು ಹಬ್ಬ ಆಚರಿಸಲಾಯಿತು.
ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಉಚಿತ ರಕ್ತದಾನ ಶಿಬಿರದಲ್ಲಿ 135 ಮಂದಿ ರಕ್ತದಾನ ಮಾಡಿದರು. 35 ಮಂದಿ ನೇತ್ರದಾನ ಮಾಡಲು ನೋಂದಾಯಿಸಿ ಕೊಂಡರು. ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು.
ಸಾರ್ವಜನಿಕರಿಗೆ ಪುನೀತ್ ರಾಜ ಕುಮಾರ್ ಅವರು ಹೆಚ್ಚಾಗಿ ಇಷ್ಟಪಡುತ್ತಿದ್ದ ಬಿರಿಯಾನಿ ಹಾಗೂ ಮೊಟ್ಟೆ ಊಟ ನೀಡಲಾಯಿತು. ಪುರಸಭೆ ಮುಖ್ಯಾಧಿಕಾರಿ ವೈ.ಎನ್ . ಸತ್ಯನಾರಾಯಣ , ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ . ಜಿ.ಎಸ್. ಶ್ರೀನಿವಾಸ್ , ತಾಲ್ಲೂಕು ಪುನೀತ್ ರಾಜ ಕುಮಾರ್ ಅಭಿಮಾನಿ ಬಳಗದ ಎಲ್ಲಾ ಸದ್ಯಸರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.