ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದ ನಂತೂರು ವೃತ್ತದ ಬಳಿ ಸ್ಕೂಟರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ- ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಬಲ್ಮಠದ ಸ್ಯಾಮುವೆಲ್ ಜೇಸುದಾಸ್ ಹಾಗೂ ಅವರ ಪುತ್ರಿ ಮೃತಪಟ್ಟವರು.
ತನ್ನ ಮಗಳ ಜತೆ ಸ್ಯಾಮುವೆಲ್ ಅವರು ಸ್ಕೂಟರಿನಲ್ಲಿ ರಸ್ತೆ ದಾಟಲು ವೃತ್ತದ ಬಳಿ ಕಾಯುತ್ತಿದ್ದ ವೇಳೆ ಟಿಪ್ಪರ್ ಲಾರಿ ಏಕಾಏಕಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಲ್ಲಿ ಇದ್ದ ತಂದೆ- ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಟಿಪ್ಪರ್ ಚಾಲಕನನ್ನು ಹಿಡಿದು ಥಳಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.