ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್) : ಇಂದು ಮಧ್ಯಾಹ್ನ ವಿಟ್ಲದ ಕಾಶಿಮಠದಲ್ಲಿ ಬೋರ್ವೆಲ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಉಕ್ಕುಡ ಆಲಂಗಾರು ನಿವಾಸಿ ರಂಜಿತ್ ಮೃತಪಟ್ಟ ಯುವಕ.
ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಬೋರ್ವೆಲ್ ಲಾರಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಬಳಿಕ ಲಾರಿಯು ಬೈಕ್ ಸವಾರರನ್ನು ಕೆಲ ಮೀಟರುಗಳ ದೂರ ಎಳೆದೊಯ್ಯದಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆ ಛಿದ್ರವಾಗಿದೆ. ಸಹಸವಾರ ಅಪಾಯದಿಂದ ಪಾರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.