(www.vknews.in) ; ಲೇಖಕಿ ದೀಪಾ ಹಿರೇಗುತ್ತಿ ರಚಿತ ‘ಫೀನಿಕ್ಸ್’ ಕೃತಿಯು 5ನೇ ಬಾರಿಗೆ ಮರುಮುದ್ರಣ ಕಂಡಿದೆ. ವೀರಲೋಕ ಪ್ರಕಾಶನ ಹೊರ ತಂದ ಈ ಪುಸ್ತಕದ ಮರು ಬಿಡುಗಡೆ ಕಾರ್ಯಕ್ರಮ ಭಾನುವಾರ ಕೋರಮಂಗಲದಲ್ಲಿರುವ ‘ಬಿಬಿಸಿ ಬುಕ್ಸ್’ ಬರ್ಗರ್ ಕಾಫಿ’ ಆವರಣದಲ್ಲಿ ನಡೆಯಿತು. ಕನ್ನಡ ಮಾಣಿಕ್ಯ ಪತ್ರಿಕೆಯ ಸಂಪಾದಕರಾದ ಶ್ರೀ ಎಂ.ಎಲ್. ಪ್ರಸನ್ನ ಅವರು ಪುಸ್ತಕವನ್ನು ಮರು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ವೀರಲೋಕ ಪುಸ್ತಕ ಪ್ರಕಾಶನದ ಪ್ರಕಾಶಕ ವೀರಕಪುತ್ರ ಶ್ರೀನಿವಾಸ್, “ಫೀನಿಕ್ಸ್’ ಎಲ್ಲರಿಗೂ ಸ್ಫೂರ್ತಿ ತುಂಬುವ ಪುಸ್ತಕವಾಗಿದ್ದು, ಓದಿಸಿಕೊಂಡು ಹೋಗುವ ಹಾಗೂ ಸಾಹಿತ್ಯ ಅಭಿರುಚಿಯನ್ನು ಉಳಿಸಿಕೊಳ್ಳುವಂತಹ ಚಾಣಕ್ಯತೆಯನ್ನು ಮೈಗೂಡಿಸಿಕೊಂಡಿದೆ ಎಂದು ವಿಶ್ಲೇಷಿಸಿದರು.
ಪುಸ್ತಕ ಪ್ರಿಯರೊಂದಿಗೆ ಲೇಖಕಿ ಶ್ರೀಮತಿ ದೀಪ ಹಿರೇಗುತ್ತಿ ಅವರು ಸಂವಾದ ನಡೆಸಿದರು. ಸಾಹಿತಿ ಯತಿರಾಜ್ ವೀರಾಂಬುಧಿ, ಕುಸುಮಾ, ಆಯರಹಳ್ಳಿ, ಶೋಭಾರಾವ್, ಗಾಯತ್ರಿ ರಾಜ್, ಸಂದೇಶ್ ಎಚ್.ನಾಯಕ್, ವಿನ್ಯಾಸ ಬಿದರಕುಂದಿ, ಎಂ.ಎಲ್. ಪ್ರಸನ್ನ ಮಾತನಾಡಿದರು. ಕೌಸ್ತುಭಾ ಭಾರತಿಪುರಂ, ಶೋಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾಹಿತ್ಯ ಶ್ರೀನಿವಾಸ್, ಟಿ.ತಿಮ್ಮೇಗೌಡ ಇತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.