ರಿಯಾದ್(ಸೌದಿ ಅರೇಬಿಯಾ,ವಿಶ್ವ ಕನ್ನಡಿಗ ನ್ಯೂಸ್): ಅರ್ಧಚಂದ್ರ ಮಂಗಳವಾರ ಸಂಜೆ ಸೌದಿ ಅರೇಬಿಯಾದಲ್ಲಿ ಕಾಣಿಸದ ಕಾರಣ ಬುಧವಾರ, ಮಾರ್ಚ್ 22, ಶಾಬಾನ್ ತಿಂಗಳ ಕೊನೆಯ ದಿನವಾಗಿರುತ್ತದೆ ಮತ್ತು ಪವಿತ್ರ ತಿಂಗಳು ಮಾರ್ಚ್ 23, ಗುರುವಾರದಿಂದ ಪ್ರಾರಂಭವಾಗಲಿದೆ ಎಂದು ಅಧಿಕೃತ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ಲಾಮಿಕ್ ಕ್ಯಾಲೆಂಡರ್ ಸಾಮಾನ್ಯವಾಗಿ 29 ಅಥವಾ 30 ದಿನಗಳಾಗಿ ಪರಿಗಣಿಸಲ್ಪಡುತ್ತದೆ. ಪ್ರತೀ ತಿಂಗಳ ಆರಂಭ ಮತ್ತು ಅಂತ್ಯವು ಅರ್ಧಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ, ಅದಕ್ಕಾಗಿಯೇ ರಂಜಾನ್ ಅನ್ನು ವಾರ್ಷಿಕವಾಗಿ ಯಾವುದೇ ನಿರ್ದಿಷ್ಟ ದಿನಗಳಲ್ಲಿ ಹೊಂದಿಸಲಾಗುವುದಿಲ್ಲ.
ಅರ್ಧ ಚಂದ್ರ ದರ್ಶನವಾದಲ್ಲಿ ಮಾಹಿತಿ ನೀಡುವ ಬಗ್ಗೆ ನಿನ್ನೆ ಸುಪ್ರೀಂ ಕೋರ್ಟ್ ಕೇಳಿ ಕೊಂಡಿತ್ತು. ಆದರೆ ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾದುದು ಧೃಡ ಪಡದಿರುವುದರಿಂದ ಗುರುವಾರ ಪವಿತ್ರ ರಂಜಾನ್ ತಿಂಗಳು ಆರಂಭವಾಗಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.