ದೋಹಾ (ವಿಶ್ವ ಕನ್ನಡಿಗ ನ್ಯೂಸ್) : ಕತಾರ್ನಲ್ಲಿ ಬಹುಮಹಡಿ ಕಟ್ಟಡವೊಂದು ಭಾಗಶಃ ಕುಸಿದಿದೆ. ಬುಧವಾರ ಬೆಳಗ್ಗೆ ದೋಹಾ ಅಲ್ ಮನ್ಸೌರಾದಲ್ಲಿ ಏಳು ಅಂತಸ್ತಿನ ವಸತಿ ಕಟ್ಟಡ ಕುಸಿದಿದೆ. ಕತಾರ್ ಸಿವಿಲ್ ಡಿಫೆನ್ಸ್, ಆಂಬ್ಯುಲೆನ್ಸ್ ಮತ್ತು ಪೊಲೀಸ್ ಸೇರಿದಂತೆ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಬುಧವಾರ ಬೆಳಗ್ಗೆ 8.18ರ ಸುಮಾರಿಗೆ ಮನ್ಸೂರ ಬಿ ರಿಂಗ್ ರಸ್ತೆಯ ಲುಲು ಎಕ್ಸ್ ಪ್ರೆಸ್ ಹಿಂಭಾಗದ ಬಹುಮಹಡಿ ಕಟ್ಟಡ ಕುಸಿದಿದೆ. ಇದು ಸಮೀಪದ ಮೂರು ಅಂತಸ್ತಿನ ಕಟ್ಟಡದ ಮೇಲೆ ಕುಸಿದಿದೆ.
ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಪಾಕಿಸ್ತಾನಿ, ಈಜಿಪ್ಟ್ ಮತ್ತು ಫಿಲಿಪಿನೋ ಕುಟುಂಬಗಳು ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಪಘಾತದ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.