ಇಸ್ಲಾಮಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಇಮ್ರಾನ್ ನಜೀರ್ ಕೊನೆಯ ಬಾರಿ 2012ರ ವಿಶ್ವ ಟ್ವೆಂಟಿ-20ಯಲ್ಲಿ ಪಾಕಿಸ್ತಾನ ಪರ ಆಡಿದ್ದರು. ಆರಂಭಿಕ ಬ್ಯಾಟ್ಸ್ಮನ್ ಆಗಿ ಪಾಕಿಸ್ತಾನದ ಭವಿಷ್ಯ ಎಂದು ಪರಿಗಣಿಸಲ್ಪಟ್ಟ ಆಟಗಾರ ಸ್ಥಿರತೆಯ ಕೊರತೆಯಿಂದ ತಂಡದಿಂದ ಹೊರಗುಳಿದಿದ್ದರು.
ಪಾಕಿಸ್ತಾನದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇದೀಗ, ಪಾಕಿಸ್ತಾನದ ಮಾಜಿ ಸ್ಟಾರ್ ಆಟಗಾರ ಇಮ್ರಾನ್ ನಜೀರ್ ಆಘಾತಕಾರಿ ಸಂಗತಿ ಬಹಿರಂಗಪಡಿಸಿದ್ದಾರೆ. ತನಗೆ ಫುಡ್ ಪಾಯ್ಸನ್ ಆಗಿತ್ತು. ವಿಷವು ನನ್ನ ಕೀಲುಗಳನ್ನು ದುರ್ಬಲಗೊಳಿಸಿದೆ. ಇತ್ತೀಚೆಗೆ ಚಿಕಿತ್ಸೆಯ ಭಾಗವಾಗಿ ಎಂಆರ್ಐ ಮಾಡಲಾಗಿತ್ತು. ಪಾದರಸದ ವಿಷದ ವರದಿಗಳಿವೆ. ಇದು ನಿಧಾನ ವಿಷವಾಗಿದೆ. ಇದು ಕೀಲುಗಳಿಗೆ ಸಿಲುಕುತ್ತದೆ ಮತ್ತು ಅವುಗಳನ್ನು ನಾಶಪಡಿಸುತ್ತದೆ ಎಂದು ಎಂದು ಹೇಳಿದ್ದಾರೆ.
ನಾನು 10 ವರ್ಷಗಳ ಕಾಲ ಚಿಕಿತ್ಸೆ ಮಾಡಿದ್ದೇನೆ. ಏಳು ವರ್ಷಗಳ ಕಾಲ ಇದರೊಂದಿಗೆ ಹೋರಾಟ ನಡೆಸಿದ್ದೇನೆ. ನಾನು ಬಹಳಷ್ಟು ಜನರನ್ನು ಅನುಮಾನಿಸಿದೆ. ಆದರೆ ನಾನು ಯಾವಾಗ ವಿಷ ಸೇವಿಸಿದ್ದೇನೆ, ಏನು ತಿಂದೆ ಎಂದು ನನಗೆ ತಿಳಿದಿಲ್ಲ, ನಾನು ನನ್ನ ದುಡಿಮೆಯನ್ನೆಲ್ಲಾ ಚಿಕಿತ್ಸೆಗೆ ಖರ್ಚು ಮಾಡಿದೆ, ಯಾರೂ ಸಹಾಯಕ್ಕೆ ಬರಲಿಲ್ಲ, ಶಾಹಿದ್ ಅಫ್ರಿದಿ ಮಾತ್ರ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ತನಗೆ ಬೆಂಬಲ ನೀಡಿದರು ಮತ್ತು ಅಫ್ರಿದಿ ಚಿಕಿತ್ಸೆಗಾಗಿ ಸುಮಾರು 50 ಲಕ್ಷ ಖರ್ಚು ಮಾಡಿದರು ಎಂದು ಇಮ್ರಾನ್ ನಜೀರ್ ಹೇಳಿದ್ದಾರೆ.
ವಿಷವು ದೇಹವನ್ನು ಪ್ರವೇಶಿಸಿದ ತಕ್ಷಣ ಕಾರ್ಯನಿರ್ವಹಿಸದ ಕಾರಣ, ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನಾನು ಹಲವು ವರ್ಷಗಳಿಂದ ಸಾವು ಬದುಕಿನ ಹೋರಾಟದಲ್ಲಿದ್ದೆ. ವಿಷ ಯಾರು ನೀಡಿದರೂ ಅವರಿಗೆ ಕೆಟ್ಟದ್ದೇನೂ ಆಗಬಾರದು ಎಂದು ಇಮ್ರಾನ್ ನಜೀರ್ ಸೇರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.