(ವಿಶ್ವ ಕನ್ನಡಿಗ ನ್ಯೂಸ್) : ವಾರಣಾಸಿಯ ಸಾರನಾಥ ಪ್ರದೇಶದ ಹೋಟೆಲ್ ಕೊಠಡಿಯಲ್ಲಿ ಭೋಜ್ಪುರಿ ನಟಿ ಆಕಾಂಕ್ಷಾ ದುಬೆ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಿನಿಮಾದ ಶೂಟಿಂಗ್ಗಾಗಿ ವಾರಣಾಸಿಗೆ ಬಂದಿದ್ದರು. ಘಟನೆಯ ಬಗ್ಗೆ ಪೊಲೀಸರು ಆಕೆಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 21, 1997 ರಂದು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜನಿಸಿದ ಆಕಾಂಕ್ಷಾ ಅವರು ಚಿಕ್ಕ ವಯಸ್ಸಿನಿಂದಲೂ ನೃತ್ಯ ಮತ್ತು ನಟನೆಯನ್ನು ಇಷ್ಟಪಡುತ್ತಿದ್ದರು. ಆದ್ದರಿಂದ ಅವರು ತಮ್ಮ ಕಿರು ನೃತ್ಯ ಮತ್ತು ನಟನೆಯ ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಪ್ರಸಿದ್ದರಾಗಿದ್ದರು. ಶನಿವಾರ ರಾತ್ರಿಯೂ ಸಹ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಒಂದು ತಿಂಗಳ ಹಿಂದೆ, ಪ್ರೇಮಿಗಳ ದಿನದಂದು ತನ್ನ ಸಂಬಂಧವನ್ನು ಅವರು ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದರು. ಸಹನಟ ಸಮರ್ ಸಿಂಗ್ ಜೊತೆಗಿನ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ‘ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ಎಂದು ಬರೆದಿದ್ದರು. ನಟಿಯ ಸಾವು ಆತ್ಮಹತ್ಯೆ ಅಥವಾ ಕೊಲೆಯೇ ಎಂದು ಶಂಕಿಸಲಾಗಿದೆ. ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.