(www. vknews.in) ; ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆಯ ಕರಡು ಪ್ರತಿಯನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ದೆಹಲಿಯ ಲಾ ಕಮಿಷನ್ ಗೆ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ವತಿಯಿಂದ ಅರ್ಜಿ ಸಲ್ಲಿಸಲಾಗಿದೆ.
ಪ್ರಧಾನಮಂತ್ರಿಗಳು ಮತ್ತು ಸಚಿವರು ವೇದಿಕೆಗಳಲ್ಲಿ ಚುನಾವಣಾ ಲಾಭವನ್ನು ಗಮನದಲ್ಲಿಟ್ಟುಕೊಂಡು ಸಮಾನ ನಾಗರಿಕ ಸಂಹಿತೆಯನ್ನು ಜಾರಿ ತರುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ ಅದರ ಕುರಿತಾದ ಅಧೀಕೃತ ಪ್ರಸ್ತಾವನೆಯಾಗಲಿ ಮತ್ತು ಕರಡು ಪ್ರತಿಯಾಗಲಿ ಸಾರ್ವಜನಿಕವಾಗಿ ಪ್ರಕಟಿಸುತ್ತಿಲ್ಲ. ಸಮಾಜದಲ್ಲಿ ಸಮುದಾಯಗಳ ನಡುವೆ ಸೌಹಾರ್ದವಿರಬೇಕು ಎಂಬುದು ವೇದಿಕೆಯ ಉದ್ದೇಶ. ಆದರೆ ಸರಕಾರದ ನಿರ್ಧಾರದಿಂದಾಗಿ ಸಮುದಾಯಗಳಲ್ಲಿ ಗೊಂದಲ ಉಂಟಾಗಿದೆ. ಗೊಂದಲವನ್ನು ನಿವಾರಿಸಿ ಸರ್ಕಾರ ಉದ್ದೇಶಿಸಿರುವ ನೀತಿಯ ಸ್ವರೂಪ ತಿಳಿಯಲು ಲಾ ಕಮಿಷನ್ ಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ವೇದಿಕೆಯ ಅಧ್ಯಕ್ಷ ಅನೀಸ್ ಪಾಶಾ ತಮ್ಮ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.