(www.vknews.in) ; ಮಲ್ಲೂರು ಟುಡೇ ಮಿಡಿಯಾ ಸೆಂಟರ್ ವತಿಯಿಂದ 2 ನೇ ವಾರ್ಷಿಕೋತ್ಸವದ ಪ್ರಯುಕ್ತ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಗೌರವ ಪುರಸ್ಕಾರ ಹಾಗೂ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೆ ಅಭಿನಂದನಾ ಕಾರ್ಯಕ್ರಮ ಬಂಟರ ಭವನ ಬದ್ರಿಯಾನಗರ, ಪೆರ್ಮಂಕಿ ಯಲ್ಲಿ ಇತ್ತೀಚೆಗೆ ಜರುಗಿತು. ಉಳಾಯಿಬೆಟ್ಟು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾದ ಹರಿಕೇಷ್ ಶೆಟ್ಟಿ, ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಚಿಕ್ಕಬೆಟ್ಟು ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಾದ ಡಿಯೋನ್ ಪಿಂಟೋ ಬೊಂಡಂತಿಲ, ಹರ್ಷಿಯಾ ಉದ್ದಬೆಟ್ಟು, ನಸೀಫಾ ಕಲಾಯಿ, ನಿಹಾಲ್ ಅಹಮ್ಮದ್ ಬದ್ರಿಯಾನಗರ, ಫಾತಿಮಾ ಸಲ್ವಾ ದೆಮ್ಮಲೆ, ಫಾತಿಮಾ ಸಹನಾ ದೆಮ್ಮಲೆ, ರಕ್ಷಾ ಉದ್ದಬೆಟ್ಟು ಹಾಗೂ ಫಾತಿಮಾ ರಿಝಾ ಅಮ್ಮುಂಜೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮದರಸ ಕಲಿಕೆಯಲ್ಲಿ ಸಾಧನೆಗೈದವರಿಗೂ ಗೌರವ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಕುಂಬಾರ ವೃತ್ತಿಯ ಹಿರಿಯ ಸಾಧಕ ಗಣಪ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ಸಹರಾ ವಿದ್ಯಾಸಂಸ್ಥೆ ಅಡ್ಡೂರು ಅಧ್ಯಕ್ಷರಾದ ಯು.ಪಿ ಇಬ್ರಾಹಿಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಧಾರ್ಮಿಕ ದತ್ತಿ ಪರಿಷತ್ ಮಾಜಿ ಸದಸ್ಯರಾದ ಪದ್ಮನಾಭ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಮಾಜಿ ಸಚಿವರಾದ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕುದ್ರೋಳಿ ಗೋಕರ್ಣನಾಥ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಆರ್, ಝೀ ನ್ಯೂಸ್ ಕನ್ನಡ ದ.ಕ ಜಿಲ್ಲಾ ಮುಖ್ಯ ವರದಿಗಾರ ಶಂಶೀರ್ ಬುಡೋಳಿ, ಆರೋಗ್ಯ ಅಧಿಕಾರಿ, ಬರಹಗಾರ್ತಿ ಆಯಿಷಾ ಪೆರ್ನೆ, ಉದ್ದಬೆಟ್ಟು ಮಸ್ಜಿದ್ ಅಧ್ಯಕ್ಷರಾದ ಹನೀಫ್ ಬೊಲ್ಲಂಕಿಣಿ, ಬದ್ರಿಯಾನಗರ ಮಸ್ಜಿದ್ ಅಧ್ಯಕ್ಷರಾದ ಅಶ್ರಫ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹಸನ್ ಬಾವಾ ಮಲ್ಲೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಸ್ತಫಾ ಬದ್ರಿಯಾನಗರ ಕಿರಾಅತ್ ಪಠಿಸಿದರು. ಚೆಯರ್ ಮ್ಯಾನ್ ಜಬ್ಬಾರ್ ಮಲ್ಲೂರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಗೈದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಕಲಾಯಿ ಧನ್ಯವಾದಗೈದರು. ಅಲ್ತಾಫ್ ದೆಮ್ಮಲೆ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.