(www.vknews.in)ವಿಕ್ರಮ
ಬಾನಿನಂಗಳದಲ್ಲಿ ನೆಗೆಯುತ ಗುರಿಯ ನೆಟ್ಟಿತು ವಿಕ್ರಮ ಚಂದ್ರಲೋಕದ ದಕ್ಷಿಣಕ್ಕೆ ಅಡಿಯನಿಟ್ಟ ಪರಾಕ್ರಮ
ನುರಿತ ತಂತ್ರಜ್ಞರು ವಿಜ್ಞಾನಿಗಳ ಹಲವು ವರುಷಗಳ್ ಪರಿಶ್ರಮ ದೈವದೊಲುಮೆಯು ಜನರ್ಹಾರೈಕೆಯು ಫಲಿಸಿ ದೇಶದಿ ಸಂಭ್ರಮ
ಸಹಸ್ರ ಯೋಜನ ಯಾನ ನಡೆಸಿರೆ ಜನರ ಮನದಿ ಕಾತುರ ಇಸ್ರೋ ಬಳಗದ ಸಾಹಸಕ್ಕೆ ಚಂದ್ರಯಾನವೇ ಉತ್ತರ
ತಂತ್ರಜ್ಞಾನದ ಮೇರು ಶಿಖರವ ಏರುತಿರುವುದು ಭಾರತ ಆದಿತ್ಯ ಯಾನಕು ಬಿಡದೆ ಲಗ್ಗೆಯ ಇಡುತಲಿಹುದು ಸಾರುತ
ವಿಶ್ವದೆಲ್ಲೆಡೆ ಘನತೆ ಕೀರ್ತಿಯು ಹಬ್ಬಿ ಹರಡುತ್ತಿರುವುದು ಭಾರತೀಯರ ಎದೆಯೊಳೆಲ್ಲ ಹೆಮ್ಮೆ ಹೊಮ್ಮುತ್ತಿರುವುದು
ಯಶೋದಾ ಭಟ್ಟ ದುಬೈ ಕನ್ನಡ ಸಾಹಿತ್ಯ ಸಂಘ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.