(www. vknews.in) ಸಾಮರಸ್ಯದ ರಾಜಕುಮಾರ ಸಿ ಎಮ್ ಅಬ್ದುಲ್ ರವೂಫ್.
ಯುವ ಪೀಳಿಗೆಗೆ ಆಶಾಕಿರಣವಾಗಿ ಬೆಳೆದು ನಿಂತು ಎಲ್ಲರ ಕಷ್ಟ ಸುಖಗಳಿಗೆ ರಾತ್ರಿ ಹಗಲೆನ್ನದೆ ಸ್ಪಂದಿಸಿ ಅಹವಾಲುಗಳನ್ನು ಸ್ವೀಕರಿಸಿ ತಕ್ಕ ಪರಿಹಾರ ಒದಗಿಸಿ ಕೊಡಲು ಶ್ರಮಿಸುವ ಶ್ರಮಜೀವಿ. ಕೋವಿಡ್ ಸಂದರ್ಭ ಯು ಟಿ ಕೆ ಹೆಲ್ಪ್ ಲೈನ್ ಮುಖಾಂತರ ಅದೆಷ್ಟೋ ಬಡ ಜೀವಿಗಳಿಗೆ ಆಶ್ರಯ ನೀಡಿ ಪಾಮರರ ಹೃದಯಗಳಲ್ಲಿ ಇಂದಿಗೂ ಜೀವಂತ ಆಶಾಕಿರಣವಾಗಿ ನಿಂತಿರುವ ಸಿರಿವಂತ. ಉದ್ದೇಶಿಸಿದ ಉದ್ದೇಶಗನ್ನು ಈಡೇರಿಸಲು ಶ್ರಮ ಪಡುವ ಹಠವಾದಿ. ತಂದೆ ತಾಯಿ ಸಮೇತವಿರುವ ಕುಟುಂಬಗಳ ಹಾಗೂ ಅಪಾರ ಹಿತೈಷಿಗಳ ಪ್ರೀತಿ ವಾತ್ಸಲ್ಯ ತನ್ನದಾಗಿಸಿಕೊಂಡ ಸುದೈವಿ. ಜಾತಿ-ಮತ,ಧರ್ಮ-ವರ್ಣ, ಹಿರಿಯ-ಕಿರಿಯ,ಕರಿಯ-ಬಿಳಿಯ,ಅರಸ-ಆಳು,ಬಡವ- ಧನಿಕ ಎಂಬ ಗೋಡೆಗಳ ಗಡಿಯನ್ನು ದಾಟಿ ಎಲ್ಲರಿಂದಲೂ ಸೈ ಎನಿಸಿಕೊಂಡ ಸಾಮರಸ್ಯದ ರಾಜಕುಮಾರ. ಉಸಿರಾಡುವ ಹೆಣದಂತಾಗಿ ಒದ್ದಾಡುವ ಮನಸ್ಸಿಗೂ ಕೂಡಾ ಕೋಪ ಅಹಂ ಎಲ್ಲವನ್ನೂ ಸರಿಸಿ ಒಮ್ಮೆ ಮನಸಾರೆ ಮಾತಾಡಿದರೆ ಜೇನಿನಂತೆ ಸಿಹಿಯಾದ ಮಧುರ ಸ್ನೇಹವನ್ನು ನೀಡುವ ಸ್ನೇಹ ಜೀವಿ. ಕಷ್ಟ ನೋವು ನಲಿವು ಸಂತಸ ಎಲ್ಲಾ ಸಮಯದಲ್ಲೂ ನೆರವಾಗುವ ನಿಜವಾದ ನನ್ನ ಆತ್ಮೀಯ ಸ್ನೇಹಿತ,ಸಿ ಎಮ್ ಅಬ್ದುಲ್ ರವೂಫ್ ರವರ ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆದ ಆಯ್ಕೆಯು ಅರ್ಹತೆಗೆ ಸಿಕ್ಕಿದ ಗೌರವ.ಬೆಳ್ಮ ವಲಯ ಯೂತ್ ಕಾಂಗ್ರೆಸ್ ಅಧ್ಯಕ್ಷ,ಮಂಗಳೂರು ವಿಧಾನ ಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ,ದೇರಳಕಟ್ಟೆ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ, ಹೀಗೆ ಹಲವಾರು ಹುದ್ದೆಗಳನ್ನು ನಿಭಾಯಿಸಿ ಅಪಾರ ಸೇವೆಗೈದು ಅನುಭವಿ ರಾಜಕಾರಣಿಯಾದ ತಮ್ಮ ಈ ಕಾಲಾವದಿಯು ಅತ್ಯುತ್ತಮ ಸೇವೆ ಗೈದು ಇನ್ನೂ ಹಲವಾರು ಅತ್ಯುನ್ನತ ಪದವಿಯು ತಮ್ಮ ಹೆಗಲಿಗೆ ಬರುವಂತಾಗಲಿ. ತಮಗಿದು ನನ್ನ ಹೃದಯದ ಅಂತರಾಳದಿಂದ ಬರುವ ಅಭಿನಂದನೆಗಳು. ತಬೂಕ್ ದಾರಿಮಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.