(www.vknews.in) ಬೆಂಗಳೂರು : ಕ್ರಿಯಾತ್ಮಕ ರಂಗ ಚಟುವಟಿಕೆಗಳಲ್ಲಿ ತೊಡಗಿರುವ ಬೆಂಗಳೂರಿನ “ಸಂಧ್ಯಾ ಕಲಾವಿದರು” ತಂಡದವರು ತಮ್ಮ “ಮುಖವಾಡ” ನಾಟಕ ಪ್ರದರ್ಶನದ ಸಂದರ್ಭದಲ್ಲಿ ಶಿವಮೊಗ್ಗದ ಭಾರತಿಯ ಅಂಗವಿಕಲರ ಸಬಲಿಕರಣ ಸಂಘದ ಅಧ್ಯಕ್ಷ ಹಾಗೂ ಲೇಖಕ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ಖ್ಯಾತ ನಾಟಕಕಾರ, ನಿರ್ದೇಶಕ ಹಾಗೂ ನಟರಾದ ಶ್ರೀ ಎಸ್. ವಿ. ಕೃಷ್ಣ ಶರ್ಮಾ ಅವರು ಶಾಲು ಹೊದಿಸಿ ಸನ್ಮಾನಿಸಿದರು .
ಈ ಸಂದರ್ಭದಲ್ಲಿ ಖ್ಯಾತ ರಂಗ ಕರ್ಮಿ , ಕಾದಂಬರಿಕಾರ್ತಿ ಹಾಗೂ ಸಂಧ್ಯಾ ಕಲಾವಿದರು ತಂಡದ ನಿರ್ವಾಹಕಿ ಶ್ರೀಮತಿ ವೈ ಕೆ ಸಂಧ್ಯಾ ಶರ್ಮಾ ಅವರು ತಮ್ಮ ಪತಿ ಶ್ರೀ ಎಸ್. ವಿ. ಕೃಷ್ಣ ಶರ್ಮಾ ಅವರ ನಾಟಕ ವಿಮರ್ಶೆಗಳ ಸಂಕಲನ “ರಂಗವಲ್ಲಿ” ಪುಸ್ತಕವನ್ನು ಉಡುಗೊರೆ ನೀಡಿ ಶುಭ ಹಾರೈಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.