(www. vknews.in) ಕೂಡ್ಲಿಗಿ ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಡಿಡಿ ಭೇಟಿ: ವಿದ್ಯಾರ್ಥಿಗಳ ಪಲಾಯನ ಅವ್ಯವಸ್ಥೆಗೆ ಸಾಕ್ಷಿ- ಡಿಡಿ ಮಂಜುನಾಥ ಕಿಡಿ
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಸತಿ ಶಾಲೆಗೆ, ಸೆ 4ರಂದು ಇಲಾಖೆಯ ಜಿಲ್ಲಾ ನಿರ್ಧೇಶಕರಾದ ಮಂಜುನಾಥರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿ ಹಾಗೂ ಶಿಕ್ಷಕರು ತರಾಟೆಗೆ- ಇದೇ ಸಂದರ್ಭದಲ್ಲಿ ವಸತಿ ಶಾಲೆಯಲ್ಲಿದ್ದ, ಶಾಲೆಯಿಂದ ತನ್ನೂರಿಗೆ ಕೆಲ ದಿನಗಳ ಹಿಂದೆಯಷ್ಟೇ ಪಲಾಯನಗೊಂಡಿದ್ದ. ವಸತಿ ಶಾಲೆಯ ವಿದ್ಯಾರ್ಥಿಯೋರ್ವನನ್ನು, ಹಾಗೂ ವಿದ್ಯಾರ್ಥಿಯ ಪೋಷಕರನ್ನು ವಿಚಾರಿಸಿದರು. ಆಗ ವಿದ್ಯಾರ್ಥಿಯ ನಡೆ ನುಡಿ ಯನ್ನು ಗಮನಿಸಿದ ಅವರು, ವಿದ್ಯಾರ್ಥಿಯ ಶೈಕ್ಷಣಿಕ ಗುಣಮಟ್ಟ ಹಾಗೂ ನಡೆ ನುಡಿ ಸಮಾದಾನಕರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಬಂಧಿಸಿದಂತೆ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕರನ್ನು, ನಿರ್ಧೇಶಕರಾದ ಮಂಜುನಾಥರವರು ತೀರ್ವ ತರಾಟೆಗೆ ತೆಗೆದು ಕೊಂಡರು. ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡು ಹೋಗುವಷ್ಟು, ವಸತಿ ಶಾಲೆ ಅವ್ಯವಸ್ಥೆ ಹೊಂದಿದೆ ಎಂದರೆ ಏನರ್ಥ.!?. ಇದು ವಸತಿ ಶಾಲೆಯ ಅವ್ಯವಸ್ಥೆಗೆ ಕನ್ನಡಿಯಾಗಿದ್ದು, ಕಳಪೆ ನಿರ್ವಹಣೆ ಹಾಗೂ ಕಳಪೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ. ಪಲಾಯನಗೊಂಡ ಹಾಗೂ ಟಿಸಿ ಕೊಂಡೊಯ್ಯುತ್ತಿರುವ ವಿದ್ಯಾರ್ಥಿಗಳು, ಮತ್ತು ಅವರ ಪೋಷಕರೇ ಪ್ರತ್ಯಕ್ಷ ಸಾಕ್ಷಿ ಎಂದು ಅವರು ಕಿಡಿಕಾರಿದರು. ವಿದ್ಯಾರ್ಥಿಗಳಿಗಾಗಿ ಸರ್ಕಾರ ವಸತಿ ಶಾಲೆಗಳ ಮುಖಾಂತರ ವಿದ್ಯಾಭ್ಯಾಸಕ್ಕಾಗಿ, ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ ಅಗತ್ಯ ಭೋದನೆ ವ್ಯವಸ್ಥೆ ಇದೆ. ಆದರೂ ಕೂಡ ವಿದ್ಯಾರ್ಥಿಗಳು ವಸತಿ ಶಾಲೆಯನ್ನು ಬಿಟ್ಟು, ತಮ್ಮನೆಕಡೆ ಪಲಾಯನ ಮಾಡುತ್ತಿದ್ದಾರೆಂದರೆ. ಅದು ಈ ವಸತಿ ಶಾಲೆಯಲ್ಲಿನ ಕಳಪೆ ನಿರ್ವಹಣೆ, ಹಾಗೂ ಕಳಪೆ ಶಿಕ್ಷಣ ವ್ಯವಸ್ಥೆ. ಮತ್ತು ನಿರ್ವಹಿಸುವ ಅಧಿಕಾರಿಯ ನಿರ್ಲಕ್ಷ್ಯ ಧೊರಣೆ, ಹಾಗೂ ಗುಣ ಮಟ್ಟದ ಶಿಕ್ಷಣ ಇಲ್ಲದಿರುವುದೇ ಕಾರಣ ವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ಈ ಹಾಸ್ಟೆಲ್ ತೊರೆಯುತ್ತಿರುವುದು, ಇಲ್ಲಿಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇದು ವಸತಿ ಶಾಲೆಯ ಶೈಕ್ಷಣಿಕ ಗುಣ ಮಟ್ಟವನ್ನು ಪ್ರತಿಭಿಂಬಿಸುತ್ತಿದೆ, ಸದರಿ ವಸತಿ ಶಾಲೆಯಲ್ಲಿನ ಶೈಕ್ಷಣಿಕ ಗುಣಮಟ್ಟ ವನ್ನು ತೋರಿಸುತ್ತಿದೆ. ವಸತಿ ಶಾಲೆಯ ಅಸಮರ್ಪಕ ನಿರ್ವಹಣೆ ಬಗ್ಗೆ, ಪೋಷಕರಿಂದ ಅಸಂಖ್ಯಾತ ದೂರುಗಳಿದ್ದು. ಕೆಲ ಶಿಕ್ಷಕರ ಕರ್ಥವ್ಯಲೋಪದ ಕುರಿತು ಸಾಕ್ಷಷ್ಟು ದೂರುಗಳು ಕೇಳಿಬಂದಿವೆ, ವಸತಿಗೆ ಶಾಲೆಗೆ ಮಕ್ಕಳು ತಮ್ಮ ಹೆತ್ತವರನ್ನು ಬಿಟ್ಟು ಬಂದಿರುತ್ತಾರೆ. ಅದನ್ನರಿತು ಅವರೊಂದಿಗೆ ಪೋಷಕರ ಸ್ಥಾನ ತುಂಬುವ ಪ್ರಯತ್ನವನ್ನು, ವಸತಿ ಶಾಲೆಯ ನಿರ್ವಾಹಕಾಧಿಕಾರಿಗಳು ಹಾಗೂ ಶಿಕ್ಷಕರು ಮಾಡಬೇಕಿದೆ. ಶಿಕ್ಷಕರು ಉತ್ತಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರಗಳನ್ನು, ವಿದ್ಯಾರ್ಥಿಗಳಲ್ಲಿ ರೂಡಿಸಬೇಕಿದೆ ಎಂದು ಶಿಕ್ಷಕರಿಗೆ ಸೂಚಿಸಿದರು. ಕರ್ಥವ್ಯದ ಅವಧಿಯಲ್ಲಿ ಅನಗತ್ಯ ಕಾಲ ವ್ಯಯ, ಹಾಗೂ ಸದಾ ಮೊಬೈಲ್ ಬಳಕೆಯಲ್ಲಿಯೇ ಕಾಲ ಹರಣ. ಕಳಪೆ ಭೋದನೆ ಮತ್ತು ಮಕ್ಕಳೊಂದಿಗೆ ಅನುಚಿತ ವರ್ತನೆಗಳಂತಹ ಗಂಭೀರ ಆರೋಪ. ಭೋಧನೆಯ ಅಮೂಲ್ಯ ಸಮಯದಲ್ಲಿ, ಅನಗತ್ಯವಾಗಿ ಭೋದಕೇತರ ಚಟುವಟಿಗಳಲ್ಲಿ ತೊಡಗಿಕೊಳ್ಳುವುದು. ಇತ್ಯಾದಿ ಗಂಭೀರ ಆರೋಪಗಳು ಕೇಳಿಬಂದು, ಅವು ಸಾಭೀತಾದರೆ ಅಂತಹ ದುರ್ನಡತೆಯ ಶಿಕ್ಷಕರ ವಿರುದ್ಧ. ವಸತಿ ಶಾಲೆಯ ಕಾರ್ಯನಿರ್ವಾಹಕರ ವಿರುದ್ಧ ಹಾಗೂ ಸಿಬ್ಬಂದಿ ವಿರುದ್ಧ, ನಿರ್ಧಾಕ್ಷಿಣ್ಯ ಶಿಸ್ಥು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಕೆಲಸಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದು, ಸಾಭೀತಾದರೆ ನಿರ್ಧಾಕ್ಷಿಣ್ಯ ಕಠಿಣ ಕ್ರಮ- ಸದರಿ ವಸತಿ ಶಾಲೆ ಯಲ್ಲಿ, ವಿದ್ಯಾರ್ಥಿಗಳಿಂದ ಕೆಲ ಸಂದರ್ಭದಲ್ಲಿ ಕೆಲಸ ಮಾಡಿಸುತ್ತಿದ್ದಾರೆಂದು. ಅನಾಮೇದೇಯ ದೂರುಗಳು ಕೇಳಿ ಬಂದಿವೆ, ಅದು ಅಕ್ಷಮ್ಯ ಅಪರಾಧವಾಗಿದೆ. ಅದು ಸಾಭೀತಾದರೆ ಮೊದಲು, ವಸತಿ ಶಾಲೆಯ ಅಧಿಕಾರಿಯ ವಿರುದ್ಧ, ನಿರ್ಧಾಕ್ಷಿಣ್ಯ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಮತ್ತು ವಿದ್ಯಾರ್ಥಿಗಳನ್ನು ಕೆಲಸಕ್ಕೆ ಬಳಸಿಕೊಂಡ, ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದರು. ದೂರು ಪೆಟ್ಟಿಗೆ ಖಡ್ಡಾಯ- ವಸತಿ ಶಾಲೆಗಳಲ್ಲಿ ಹಾಗೂ ವಸತಿ ನಿಲಯಗಳಲ್ಲಿ, ವಿದ್ಯಾರ್ಥಿಗಳು ತಮ್ಮ ದೂರು ದುಮ್ಮಾನಗಳನ್ನು ಮತ್ತು ಸಲಹೆ ಸೂಚನೆಗಳನ್ನು ತಿಳಿಸಲು ಪೆಟ್ಟಿಗೆ ನಿರ್ಮಿಸಬೇಕಿದೆ. ಅದನ್ನು ಪ್ರತಿಯೊಂದು ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ, ವಿದ್ಯಾರ್ಥಿಗಳಿಗೆ ಕೈಗೆಟುಕುವ ಹಾಗೂ ಗೋಚರಿಸುವಂತೆ ನಿರ್ಮಿಸಿರಬೇಕು. ಅದನ್ನು ತುಂಬಾ ಸೂಕ್ಷ್ಮವಾಗಿ ಗಮನದಲ್ಲಿಟ್ಟು, ಅಧಿಕಾರಿಗಳ ನಿರ್ಧೇಶನದಂತೆ ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದರು. ನಂತರ ಅವರು ದೂರು ಪೆಟ್ಟಿಗೆಯಲ್ಲಿದ್ದ ವಿದ್ಯಾರ್ಥಿಗಳ ದೂರುಗಳನ್ನು, ಆಲಿಸಿದ ನಿರ್ಧೇಶಕರಾದ ಮಂಜುನಾಥರವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ವಸತಿ ಶಾಲಾ ಮೇಲ್ವಿಚಾರಕರು, ಹಾಗೂ ಮುಖ್ಯಾ ಕಾರ್ಯನಿರ್ವಾಹಕರೊಂದಿಗೆ ಚರ್ಚಿಸಿದರು. ಅವರು ವಸತಿ ಶಾಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವಸತಿ ಶಾಲೆಯ ಒಳಾಂಗಣ ಹಾಗೂ ಆಸು ಪಾಸಿನಲ್ಲಿ. ನೈರ್ಮಲ್ಯತೆ ಕಾಣೆಯಾಗಿದ್ದು ಸದಾ ಸ್ವಚ್ಚತೆ ಕಾಪಾಡಬೇಕಿದೆ, ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಶಿಸ್ಥು ಸಂಸ್ಕಾರ ಕಲಿಸಲು ಸೂಚಿಸಿದರು. ಸಿಬ್ಬಂದಿಯವರು ಸಮರ್ಪಕವಾಗಿ ಕರ್ಥವ್ಯ ನಿರ್ವಹಿಸಬೇಕಿದೆ, ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ, ಅಥವಾ ಸಹ ಪಾಠಿಗಳೊಂದಿಗೆ ದುರ್ನಡತೆ. ಕರ್ಥವ್ಯಕ್ಕೆ ನಿರಂತರ ಗೈರು ಹಾಜರಿ ಹಾಗೂ ಕರ್ಥವ್ಯ ಸಂದರ್ಭದಲ್ಲಿ, ಗಂಭೀರ ಲೋಪ ವ್ಯಸಗಿರುವ. ಹಾಗೂ ಅಧಿಕಾರಿಗಳೊಂದಿಗೆ ದುರ್ನಡತೆ ಬಗ್ಗೆ, ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ಥನೆ. ಮತ್ತು ವಿದ್ಯಾರ್ಥಿಗಳಿಗೆ ಭೆದರಿಕೆ ಹಾಕುವುದು, ವಿದ್ಯಾರ್ಥಿಗಳನ್ನು ಕೆಲಸಕ್ಕೆ ಬಳಸಿಕೊಂಡಿರುವುದು ತಿಳಿದು ಬಂದರೆ. ದೂರುಗಳು ಸಾಕ್ಷ್ಯಾಧಾರ ಗಳ ಸಮೇತ ಬಂದಲ್ಲಿ, ಅಂತಹವರನ್ನು ವಿರುದ್ಧ ನಿರ್ಧಾಕ್ಷಿಣ್ಯವಾಗಿ ವಜಾ ಮಾಡಲಾಗುವುದು. ಮತ್ತು ಕಾನೂನು ರೀತ್ಯ ಶಿಕ್ಷೆಗೆ ಗುರಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಆಹಾರದಲ್ಲಿ ಗುಣ ಮಟ್ಟ ಕಾಯ್ದುಕೊಳ್ಳಬೇಕಿದೆ, ಮತ್ತು ನಿಗದಿತ ಪ್ರಮಾಣದಲ್ಲಿ. ನಿಗದಿತ ಸಮಯಕ್ಕೆ ಉತ್ತಮ ರೀತಿಯ ಆಹಾರವನ್ನು, ವಿದ್ಯಾರ್ಥಿಗಳಿಗೆ ನೀಡಬೇಕಿದೆ ಎಂದು ಸೂಚಿಸಿದರು. *ನೈರ್ಮಲ್ಯತೆ ಸುರಕ್ಷತೆ ರಕ್ಷಣೆ ಮುಖ್ಯ*- ವಿದ್ಯಾರ್ಥಿಗಳ ಆರೋಗ್ಯ ಕುರಿತು ತೀವ್ರ ನಿಗಾ ವಹಿಸಬೇಕಿದೆ, ಅವರಿಗೆ ವೈಯಕ್ತಿಕ ಸ್ವಚ್ಚತೆ ಮತ್ತು ಪರಿಸರ ಸ್ವಚ್ಚತೆ ಕುರಿತು ಜಾಗ್ರತೆ ಮೂಡಿಸಬೇಕಿದೆ. ಆರೋಗ್ಯ ಪಾಲಕರು ಹಾಸ್ಟೆಲ್ ನಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸದಾ ಕೈಗೊಂಡರಬೇಕೆಂದು ಅವರು ಆದೇಶಿಸಿದರು. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಿದೆ, ವಸತಿ ಶಾಲೆ ಒಳಾಂಗಣ ಹಾಗೂ ಹೊರಾಂಗಣದಲ್ಲಿ, ಸಿಸಿ ಕ್ಯಾಮೆರಾ ಸದಾ ಕೆಲಸಮಾಡುವಂತಿರಬೇಕು. ರಾತ್ರಿ ಮತ್ತು ಹಗಲು ಪಾಳಯದ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು, ಕರ್ಥವ್ಯದಲ್ಲಿದ್ದಾಗ ಮದ್ಯ ಸೇವನೆ ದೂಮ ಪಾನ ಮಾಡಬಾರದು. ಸೆಕ್ಯುರಿಟಿ ಗಾರ್ಡ್ ಗಳ ಕರ್ಥವ್ಯ ಲೋಪ ವ್ಯಸಗಿದರೆ, ಅಧಿಕಾರಿ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಅನುಚಿತಾಗಿ ವರ್ಥಿಸಿರುವುದು ದೂರುಬಂದಲ್ಲಿ. ಅಂತಹ ಸಿಬ್ಬಂದಿಯನ್ನು ನಿರ್ಧಾಕ್ಷಿಣ್ಯವಾಗಿ ವಜಾ ಮಾಡಲಾಗುವುದು, ಮತ್ತು ಕಾನೂನು ರೀತ್ಯ ಕಠಿಣ ಶಿಸ್ಥು ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದೆಂದು ಎಚ್ಚರಿಸಿದರು. ಹೊಸಪೇಟೆಯ ಸಮಾಜ ಕಲ್ಯಾಣ ಇಲಾಖೆಯ, ಸಹಾಯಕ ನಿರ್ಧೇಶಕರಾದ ಶ್ರೀನಿವಾಸ್, ಕೂಡ್ಲಿಗಿ ಸಮಾಜ ಕಲ್ಯಾಣಾಧಿಕಾರಿ, ಜಗಧೀಶ್, ಉಪಸ್ಥಿತರಿದ್ದರು. ಡಾ” ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಮೇಲ್ವಿಚಾರಕ ಅಧಿಕಾರಿ, ಹಾಗೂ ಪ್ರಾಂಶುಪಾಲರಾದ ಶೋಭ. ಬಾಲಕ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿಗಳು, ಹಾಗೂ ಶಿಕ್ಷಕರು ಸೇರಿದಂತೆ ವಸತಿ ಶಾಲಾ ಸಿಬ್ಬಂದಿ ಯವರು ಹಾಜರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.