ಶೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್) : ಸಮಾಜದ ಎಲ್ಲ ವರ್ಗದ ಜನ ಪರಿಸರ ಮಾಲಿನ್ಯ ತಡೆಯಲು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ವಚ್ಛ ಭಾರತ್ ಮಿಷನ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಕಚೇರಿಗಳು, ನಿಗಮ ಮಂಡಳಿಗಳು, ಶಾಲಾ ಕಾಲೇಜುಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಅಭಿಯಾನ ಕಾರ್ಯಕ್ರಮ ಜಾರಿಗೊಳಿಸಬೇಕು ಎಂದು ಹೇಳಿದರು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಮಾತನಾಡಿ, ನಾಗರಿಕರು ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಪುನರ್ ಬಳಕೆ ಮಾಡಬೇಕು. ಪುನರ್ ಉತ್ಪಾದನೆ ಮಾಡಬೇಕು. ಯಾವುದನ್ನೂ ವ್ಯರ್ಥ ಎಂದು ಬಗೆದು ಹೊರಗೆ ಎಸೆಯಬಾರದು ಎಂದು ಹೇಳಿದರು.
ಪುರಸಭೆ ಮೂರು ಬಗೆಯ ವಸ್ತುಗಳನ್ನು ಸ್ವೀಕರಿಸುತ್ತದೆ. ನಾಗರಿಕರು ವಸ್ತುಗಳನ್ನು ವಿಂಗಡಿಸಿ ನೀಡಿದಲ್ಲಿ ಸುಲಭವಾಗಿ ವಿಭಾಗವಾರು ಶೇಖರಣೆ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಈಗಾಗಲೇ ನಾಗರಿಕರ ಸಭೆ ಕರೆದು ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಪುರಸಭೆ ಕಚೇರಿ ವ್ಯವಸ್ಥಾಪಕ ನವೀನ್ ಚಂದ್ರ, ಸದಸ್ಯ ಬಿ.ವೆಂಕಟರೆಡ್ಡಿ, ಸ್ವಚ್ಛ ಭಾರತ್ ಮಿಷನ್ ರಾಯಭಾರಿ ಮಾಯಾ ಬಾಲಚಂದ್ರ, ಎಸ್ಬಿಐ ಶಾಖಾ ವ್ಯವವಸ್ಥಾಪಿಕಿ ಉಮಾ, ಕಂದಾಯ ನಿರೀಕ್ಷಕ ಎನ್.ಶಂಕರ್, ಮುಖ್ಯಾ ಶಿಕ್ಷಕ ಎಂ.ಬೈರೇಗೌಡ, ಸಂತೋಷ್, ಸುರೇಶ್, ನರಸಿಂಹಮೂರ್ತಿ, ನವೀನ್, ಬೈರೆಡ್ಡಿ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.