ಕೋಲಾರ (ವಿಶ್ವ ಕನ್ನಡಿಗ ನ್ಯೂಸ್):ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಮುಂದಿನ ಐದು ವರ್ಷಗಳ ಅವಗೆ ಅಧ್ಯಕ್ಷರಾಗಿ ಕೆ.ಎಸ್. ಗಣೇಶ್ ಸತತ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದರು. ಸಂಘದ ಉಪಾಧ್ಯಕ್ಷರಾಗಿ ಅಬ್ಬಣಿ ಶಂಕರ್ ಅವಿರೋಧವಾಗಿ ಆಯ್ಕೆಯಾದರು. ನಗರದ ಅಂತರಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಗುರುವಾರ ಚುನಾವಣಾಧಿಕಾರಿ ಶಿವಶಂಕರ್ ಅಧ್ಯಕ್ಷತೆಯಲ್ಲಿ ಜರುಗಿದ ಚುನಾವಣಾ ಸಭೆಯಲ್ಲಿ ಇವರ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು.
ಇದಕ್ಕೂ ಮುನ್ನ ಜರುಗಿದ ನಿರ್ದೇಶಕರ ಚುನಾವಣೆಯಲ್ಲಿ ಸಂಘದ ನಿರ್ದೇಶಕರಾಗಿ 19 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಂಘದ ನಿರ್ದೇಶಕರಾಗಿ ಕೆ.ಎಸ್. ಗಣೇಶ್, ಬಿ.ವಿ.ಗೋಪಿನಾಥ್, ಬ್ಯಾಲಹಳ್ಳಿ ಗೋವಿಂದಗೌಡ, ಅಬ್ಬಣಿ ಶಂಕರ್, ಎಚ್.ಎನ್. ಮುರಳೀಧರ್, ವಿ. ಮುನಿರಾಜು, ಎ. ಸದಾನಂದ, ಎ.ಜಿ. ಸುರೇಶ್ಕುಮಾರ್, ಬಿ.ಎಲ್. ರಾಜೇಂದ್ರಸಿಂಹ, ಎಸ್. ರವಿಕುಮಾರ್, ಪಿ.ಎನ್. ದಾಸ್, ಎಂ.ನಾಗರಾಜಯ್ಯ, ಸಿ.ವಿ. ನಾಗರಾಜ್, ಎಚ್.ಎಲ್. ಸುರೇಶ್, ಎಂ.ಸೋಮಶೇಖರ್, ವಿ.ಈಶ್ವರ್, ಎಲ್. ರೂಪೇಶ್, ಎಂ.ವರಲಕ್ಷ್ಮಿ, ಕೆ.ಗೋಪಿಕಾ ಮಲ್ಲೇಶ್ ಅವಿರೋಧವಾಗಿ ಆಯ್ಕೆಯಾಗಿದ್ದರು. 2007 ರಲ್ಲಿ ಆರಂಭವಾಗಿದ್ದ ಪತ್ರಕರ್ತರ ಸಹಕಾರ ಸಂಘಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ಪತ್ರಕರ್ತರು ಷೇರುದಾರ ಸದಸ್ಯರಾಗಿದ್ದಾರೆ.
ಹಿಂದಿನ ಎರಡು ಅವಧಿಯಿಂದಲೂ ಕೆ.ಎಸ್.ಗಣೇಶ್ ಅವಿರೋಧವಾಗಿ ಆಯ್ಕೆಯಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, ಇದೀಗ ಮೂರನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವುದು ಹ್ಯಾಟ್ರಿಕ್ ಸಾಧನೆಯಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ. ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್, ಸಜ್ಜಾದುಲ್ಲಾ, ಅತಾವುಲ್ಲ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್, ಪತ್ರಕರ್ತರಾದ ಕೋ.ನಾ. ಮಂಜುನಾಥ್, ವೆಂಕಟೇಶಬಾಬಾ, ಸಿ.ಜಿ. ಮುರಳಿ, ಎಸ್.ಎನ್. ಪ್ರಕಾಶ್, ಬೆಟ್ಟಪ್ಪ, ಮಹೇಶ್, ಸುನೀಲ್ ಕುಮಾರ್, ಲಕ್ಷ್ಮೀಪತಿ, ಪುನೀತ್, ಚಾಂದ್ಪಾಷಾ, ಚಂದು, ರಾಘವೇಂದ್ರ, ಅಮರೇಶ್, ಮದನ್, ವೆಂಕಟೇಶ್, ಅಮರ್, ಸುಧಾಕರ್, ಸಂಘದ ಸಿಇಒ ಗಂಗಾಧರ್, ಮುಖಂಡರಾದ ಮುನಿವೆಂಕಟ ಯಾದವ್ ಮತ್ತಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.