ಮಂಗಳೂರು (www.vknews.in) : ಧಾರ್ಮಿಕ ಕಾರ್ಯಕ್ರಮವೊಂದರ ನಂತರ ಹುಬ್ಬಳಿಯಲ್ಲಿ ಪ್ರಮೋದ್ ಮುತಾಲಿಕ್ ಮುಸ್ಲಿಮರ ನಂಬಿಕೆಯ ಶೃದ್ಧಾ ಕೇಂದ್ರದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿರುತ್ತಾರೆ. ತಾನು ಮುಸ್ಲಿಮರ ಶೃದ್ಧಾ ಕೇಂದ್ರದ ವಿಶ್ವಾಸವನ್ನು ಮಲಿನ ಗೊಳಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಪ್ರಮೋದ್ ಮುತಾಲಿಕ್ ಅನ್ಯರ ಶೃದ್ಧಾ ಕೇಂದ್ರಗಳನ್ನು ಮಲಿನಗೊಳಿಸಲು ಇನ್ನೊಮ್ಮೆ ಹುಟ್ಟಿ ಬರಬೇಕಾಗುತ್ತದೆ.
ಭಾರತವೆಂಬುದು ಸರ್ವ ಮತ ಧರ್ಮೀಯರಿಗೆ ಆರಾಧನೆಯ ಆಚರಣೆಯ ಹಕ್ಕನ್ನು ನೀಡುತ್ತದೆ. ಸಂವಿಧಾನ ಭದ್ದ ದಾರ್ಮಿಕ ಸ್ವಾತಂತ್ರ್ಯಕ್ಕೆ ಮತ್ತು ಜನರ ಶೃದ್ಧಾ ವಿಶ್ವಾಸವನ್ನು ಮಾಲಿನ್ಯ ಗೊಳಿಸುವ ಪ್ರಮೋದ್ ಮುತಾಲಿಕ್ ನಂತಹ ವಿಷ ಕ್ರಿಮಿಗಳಿಗೆ ಪ್ರಜಾಪ್ರಭುತ್ವದಲ್ಲಿ ಸೂಕ್ತವಾದ ನಾಶಕಗಳನ್ನು ಸಿಂಪಡಿಸಲಾಗುವುದು.ಮುತಾಲಿಕ್ ನಂತವರು ತಿಳಿದಿರಲಿ. ರಾಜ್ಯದಲ್ಲಿ ವಿದ್ವೇಶ ಕಾರಿದ ಕರಾವಳಿಯ ಬಾಡಿಗೆ ಭಾಷಣಕಾರ್ತಿಗೆ ಪ್ರಸ್ತುತ ಬಂದಿದೊದಗಿದ ಸ್ಥಿತಿ ಮುತಾಲಿಕ ನಂತವರಿಗೆ ಬರಲು ಅಧಿಕ ಅವಧಿಯಿಲ್ಲ.ಅರಿಯಲಿ.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.