ಮಂಗಳೂರು (www.vknews.in) : ಏಪ್ರಿಲ್ ತಿಂಗಳಲ್ಲಿ ಹಾಸನಕ್ಕೆ ಬಂದಿದ್ದ ಪ್ರಧಾನ ಮಂತ್ರಿ ಮೋದಿಯವರು ಜೆಡಿಎಸ್ ಪಕ್ಷದ ಬಗ್ಗೆ ಪ್ರಸ್ತಾಪಿಸಿ ಜೆಡಿಎಸ್ ಪಕ್ಷವು ದೇವೇಗೌಡ ಕುಟುಂಬಸ್ಥರ ಪ್ರೈವೇಟ್ ಲಿಮಿಟೆಡ್ ಫ್ಯಾಮಿಲಿ ಪಾರ್ಟಿ ಎಂದು ಹೇಳಿಕೆ ನೀಡಿದ್ದು, ಕೇವಲ ಐದು ತಿಂಗಳಲ್ಲಿಯೇ ರಾಜ್ಯದ ಮೋದಿ ಪರಿವಾರ ದೇವೇಗೌಡರ ಪ್ರೈವೇಟ್ ಲಿಮಿಟೆಡ್ ಫ್ಯಾಮಿಲಿ ಪಾರ್ಟಿಯಲ್ಲಿ ವಿಲೀನ ಆಗಿ ಅವಿಭಜಿತ ಖಾಸಗಿ ಕುಟುಂಬ ಆಯಿತೇ ಎಂದು ಕರ್ನಾಟಕ ಜನತೆಗೆ ಮೋದಿ ಉತ್ತರಿಸಲಿ.
ಕುಟುಂಬ ರಾಜಕಾರಣಕ್ಕೆ ನಾವು ವಿರುದ್ಧ ಎಂದು ಬೊಬ್ಬಿರಿಸುತ್ತಿದ್ದ ಬಿಜೆಪಿ ಕರ್ನಾಟಕದ ಜನತೆಯನ್ನು ಕುಟುಂಬ ಪಾಳೇಗಾರಿಕೆ ರಾಜಕೀಯದಲ್ಲಿ ಗುಲಾಮರಾಗಿಸು ತ್ತಾರೆಯೆ ಎಂದು ಉತ್ತರಿಸಬೇಕಿದೆ. ದೇವೇಗೌಡರು ಕರ್ನಾಟಕದ ಜನರನ್ನು ವಸಾಹತು ಶಾಹಿಗಳ ಅಧೀನಕ್ಕೆ ತಳ್ಳಲು ಮಾಡುವ ಪ್ರಯತ್ನ ಮುಂದಿನ ಲೋಕ ಸಭೆ ಚುನಾವಣೆಯಲ್ಲಿ ವಿಫಲವಾಗಲಿದೆ. ಕರ್ನಾಟಕದ ಜನರು ಪ್ರಬುದ್ದರಾಗಿದ್ದಾರೆ.
ಕೆ.ಅಶ್ರಫ್ (ಮಾಜಿ ಮೇಯರ್)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.