ಅಜ್ಮಾನ್ (www.vknews.in) : ವಿದೇಶಿ ಕನ್ನಡಿಗರ ಮೆಚ್ಚಿನ ಓದುಗ ಸಂಗಾತಿ ಗಲ್ಫ್ ಇಶಾರ ಮಾಸಿಕ ಪತ್ರಿಕೆಯ 23-24 ಸಾಲಿನ ಚಂದಾಬಿಯಾನದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಅಜ್ಞಾನ್ ನಗರದ ತುಂಬೆ ಮೆಡಿಸಿಟಿ ಸಭಾ ಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ.. ಮುಖ್ಯ ಅತಿಥಿಗಳು: ಹಝ್ರತ್ ಫಾಝಿಲ್ ರಝ್ವಿ ಕಾವಲ್ಕಟ್ಟೆ (ಅಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾತ್) ಬಹು ಇಕ್ಬಾಲ್ ಬರಕ. (ಕಾರ್ಯದರ್ಶಿ – ವೆಲ್ಫೇರ್ ಇಲಾಖೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ) ಮುಸ್ತಫಾ ನಈಮಿ (ಕೋಶಾಧಿಕಾರಿ – ಎಸ್ಎಸ್ಎಫ್ ಕರ್ನಾಟಕ ರಾಜ್ಯ) ಸಿರಾಜ್ ಪತ್ರಿಕೆಯ ಮ್ಯಾನೇಜರ್ ರಾದ ಶೆರಿಫ್ ಕಾರಶೆರಿ ರವರು ಓದಿನ ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ವಿದೇಶಿ ಕನ್ನಡಿಗರ ಅತೀ ದೊಡ್ಡ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಮುಖ ವಾಹಿನಿ ಯಾಗಿರುವ ಇಶಾರ ಮಾಸ ಪತ್ರಿಕೆಯು ಯುಎಇಯಿಂದ ಅಧಿಕೃತವಾಗಿ ಪ್ರಕಟಗೊಳ್ಳುವ ಏಕೈಕ ಕನ್ನಡ ಮಾಸಿಕವಾಗಿದ್ದು ವಿದೇಶಿ ಕನ್ನಡಿಗರ ಕನ್ನಡ ಪ್ರೇಮದ ದ್ಯೋತಕವಾಗಿದೆ. ಕನ್ನಡಿಗರು ಅತೀ ಹೆಚ್ಚು ಸಂಖ್ಯೆಯಲ್ಲಿ ಚಂದಾದಾರರಾಗುವ ಮೂಲಕ ಪತ್ರಿಕೆಯ ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ಕೆಸಿಎಫ್ ಮೂಲಗಳು ತಿಳಿಸಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.