ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಗರಸಭೆಯ ವ್ಯಾಪ್ತಿಯ ಆರೋಗ್ಯ ಶಾಖೆ, ಕಂದಾಯ ಶಾಖೆ ಹಾಗೂ ತಾಂತ್ರಿಕ ಶಾಖೆಯಲ್ಲಿ ಸಾಧಿಸಲಾದ ಪ್ರಗತಿಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಕೋಲಾರ ನಗರಸಭೆಯವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಶೇಖರಣೆಯಾಗುತ್ತಿರುವ ಬಗ್ಗೆ ಸಂಬಂಧಿತಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದರು. ಆಸ್ತಿ ತೆರಿಗೆ ವಸೂಲಾತಿಗಾಗಿ ಬಿಲ್ಲೆಕ್ಟರ್ಗಳಿಗೆ ಗುರಿ ನಿಗಧಿಪಡಿಸಿ ನಿಗಧಿತ ಅವಧಿಯೊಳಗೆ ಕರ ವಸೂಲಾತಿ ಮಾಡಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಪೌರಾಯುಕ್ತರಾದ ಶಿವನಂದ್, ಕಾರ್ಯಪಾಲಕ ಅಭಿಯಂತರರಾದ ಶ್ರೀನಿವಾಸ್, ನೋಡಲ್ ಅಧಿಕಾರಿ ಆರ್. ಶ್ರೀಕಾಂತ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಂಗಾಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ದೌರ್ಜನ್ಯ-ಸಂತ್ರಸ್ಥೆಗೆ ಪರಿಹಾರ ಇದೇ ಸಂದರ್ಭದಲ್ಲಿ ಕುಟುಂಬದ ಯಜಮಾನನ ಕೊಲೆಯಿಂದ ನೊಂದು ಬೆಂದಿರುವ ಮಹಿಳೆಗೆ ಪ್ರಸ್ತುತ 4,12,500ರೂ ಪರಿಹಾರ ಧನ ನೀಡಲಾಗುತ್ತಿದ್ದು ಸಂತ್ರಸ್ತೆಗೆ ಸರ್ಕಾರಿ ನೌಕರಿಯನ್ನೂ ಸಹಾ ಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.
ಜಿಲ್ಲಾಡಳಿತದ ಭವನದಲ್ಲಿ ಶನಿವಾರ ನಡೆದ ಕಂದಾಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಲೂರು ತಾಲೂ ಕಿನ ಹುರುಳಗೆರೆ ಗ್ರಾಮದ ಸಿ.ಎನ್.ರಮ್ಯಶ್ರೀನಿವಾಸ್ ಅವರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು. ರಮ್ಯ ಅವರ ಪತಿ ಶ್ರೀನಿವಾಸ್ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದು ಹೀಗಾಗಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಇದೀಗ 4.12 ಲಕ್ಷ ರೂ ಪರಿಹಾರ ನೀಡಲಾಗಿದ್ದು ಮುಂದೆ ಪೊಲೀಸರು ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ ತಕ್ಷಣ ಉಳಿದ 4.12 ಲಕ್ಷ ರೂ. ಗಳನ್ನು ಮಹಿಳೆ ಬ್ಯಾಂಕ್ ಆನ್ಲೈನ್ನಲ್ಲಿ ವರ್ಗಾವಣೆ ಮಾಡಲಾಗುತ್ತದೆ ಎಂದರು.
ಮಹಿಳೆಗೆ ಸರ್ಕಾರಿ ನೌಕರಿ ಕೊಡಲು ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು ಪೊಲೀಸ್ ಅಧಿಕಾರಿಗಳು ಆರೋಪಿಗಳಿಗೆ ಬೇಲ್ ಸಿಗದಂತೆ ಸರ್ಕಾರಿ ವಕೀಲರ ಮೂಲಕ ಅರ್ಜಿ ಹಾಕಿಸ ಬೇಕೆಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸ ಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
ಮಹಿಳೆಯೊಬ್ಬರು ಪೊರಕೆಯಿಂದ ಹೊಡೆದು ಜಾತಿನಿಂದನೆ ಮಾಡಿದರು ಎಂಬ ಕಾರಣಕ್ಕೆ ಮನನೊಂದ ಶ್ರೀನಿವಾಸ್ ಸೆಪ್ಟೆಂಬರ್ 23ರಂದು ಆತ್ಮಹತ್ಯೆಗೆ ಶರಣಾಗಿದ್ದು ಈ ಸಂಬಂಧ ಪೊಲೀಸರು ಆರ್.ರಮೇಶ್, ಎಚ್.ಆರ್. ಅಶೋಕ್, ಎಂ.ಎ. ಮಂಜುಳ ಹಾಗೂ ಎಚ್.ಜಿ. ಶಶಿಕುಮಾರ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ. ಶ್ರೀನಿವಾಸನ್, ಸಹಾಯಕ ನಿರ್ದೇಶಕ ಶಿವಕುಮಾರ್, ಸಿಬ್ಬಂದಿ ಪ್ರಕಾಶ್, ಬಾಬು, ವಿಶಾಕ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.