(www.vknews.in) ಯುದ್ಧಾಪರಾಧಿ ನೆತನ್ಯಾಹು ಎಂಬ ಕಾಂಗ್ರೆಸ್ ಸಂಸದ ಹೇಳಿಕೆಗೆ ಬಿಜೆಪಿ ವಿರೋಧ
ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಉನ್ನಿಥಾನ್ ಅವರ ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಇದು ಶೋಚನೀಯ ಸಂಗತಿ ಎಂದಿದೆ. ಪ್ಯಾಲೆಸ್ಟೀನ್ ಪರವಾಗಿ ಇತ್ತೀಚೆಗೆ ಯುನೈಟೆಡ್ ಮುಸ್ಲಿಂ ಜಮಾ-ಅತ್ ಹಮ್ಮಿಕೊಂಡಿದ್ದ ಒಗ್ಗಟ್ಟು ಪ್ರದರ್ಶನ ಕಾರ್ಯಕ್ರಮದಲ್ಲಿ ಗಾಜಾ ಪಟ್ಟಿಯಲ್ಲಿ ಯುದ್ಧದ ಮೂಲಕ ಪ್ಯಾಲೆಸ್ಟೀನ್ನ ಸಾವಿರಾರು ನಾಗರಿಕರನ್ನು ಕೊಲೆಗೈದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧಾಪರಾಧಿಯಾಗಿದ್ದಾರೆ. ಅವರನ್ನು ಯಾವುದೇ ವಿಚಾರಣೆಗೆ ಒಳಪಡಿಸದೆ ಗುಂಡಿಟ್ಟು ಹತ್ಯೆ ಮಾಡಬೇಕಿದೆ’ ಜಿನೀವಾ ಸಮಾವೇಶದ ಒಪ್ಪಂದವನ್ನು ನೆತನ್ಯಾಹು ಉಲ್ಲಂಘಿಸಿದ್ದಾರೆ. ಆ ಮೂಲಕ ಜಗತ್ತಿನ ಮುಂದೆ ಯುದ್ಧಾಪರಾಧಿಯಾಗಿ ನಿಂತಿದ್ದಾರೆ. ಅವರು ಎಸಗಿರುವ ಕೃತ್ಯ ಪರಿಗಣಿಸಿ ಅವರನ್ನು ಹತ್ಯೆ ಮಾಡಬೇಕಿದೆ ಎಂದು ಹೇಳಿದ್ದರು. ಎರಡನೇ ಮಹಾಯುದ್ಧದ ನಂತರ ಜರ್ಮನಿಯ ನ್ಯೂರೆಂಬರ್ಗ್ ಯುದ್ಧಾಪರಾಧಿಗಳ ವಿಚಾರಣೆಯ ಸ್ಥಳವಾಗಿತ್ತು. ಆದರೆ, ಅಲ್ಲಿ ಯುದ್ಧಾಪರಾಧಿಗಳನ್ನು ಯಾವುದೇ ವಿಚಾರಣೆಗೆ ಒಳಪಡಿಸದೆ ಗುಂಡಿಟ್ಟು ಹತ್ಯೆ ಮಾಡಲಾಗುತ್ತಿತ್ತು. ಈಗ ಅಂತಹ ನ್ಯೂರೆಂಬರ್ಗ್ ವಿಚಾರಣೆಯ ಅಗತ್ಯವಿದೆ ಎಂದು ಉನ್ನಿಥಾನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್, ‘ಸಂಸದರ ಮಾತಿನ ಹಿಂದೆ ಭಯೋತ್ಪಾದಕರ ಪರ ಪ್ರಚಾರ ಮಾಡುವ ಉದ್ದೇಶ ಅಡಗಿದೆ. ಹಾಗಾಗಿ, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಿದೆ’ ಎಂದು ‘ಎಕ್ಸ್’ನಲ್ಲಿ ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.