(www.vknews.in) ವೈದ್ಯಕೀಯ ಸಾಹಿತ್ಯ ಜನ ಮಾನಸಕ್ಕೆ ತಲುಪಲಿ-ಡಾ ಚಕ್ರಪಾಣಿ
ಡಾ ಚೂಂತಾರು ಅವರು ಬರೆದ ಧನ್ವಂತರಿ ಪುಸ್ತಕ ವು ವಿವಿಧ ರೋಗ ಲಕ್ಷಣಗಳು ಹಾಗೂ ವಿವರವನ್ನು ನೀಡುವ ಕೃತಿಯಾಗಿದ್ದು ಓದಿಸಿಕೊಂಡು ಹೋಗುವ ಗುಣವುಳ್ಳ ಭಾಷೆ ಹೊಂದಿದೆ. ಜೀವನ ಶೈಲಿ ಬದಲಾಯಿಸಿಕೊಂಡು ರೋಗದಿಂದ ದೂರ ಉಳಿಯಬಹುದಾದ ಸಲಹೆಗಳು ಮತ್ತು ಭವಿಷ್ಯದಲ್ಲಿ ವೈದ್ಯಕೀಯ ಎಂಬ ವೈದ್ಯಕೀಯ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬಲ್ಲ ಅಧ್ಯಾಯ ಹೊಂದಿದೆ ವೈದ್ಯ ನಿಂತ ನೀರಾಗದೆ ನಿರಂತರ ಅಧ್ಯಯನ / ಅಭ್ಯಾಸಶೀಲನಾಗಬೇಕು ಎಂದು ಡಾ. ಶಿಕಾರಿಪುರ ಕೃಷ್ಣಮೂರ್ತಿ ನುಡಿದರು.
ಪುಸ್ತಕ ವನ್ನು ಲೋಕಾರ್ಪಣೆ ಗೊಳಿಸಿದ ಡಾ ಚಕ್ರಪಾಣಿ ಅವರು ಇಂತಹ ಕೃತಿಗಳಿಂದ ಜನರಿಗೆ ಬಹಳ ಉಪಯೋಗ ಎಂದರು. ವೈದ್ಯರ ಮತ್ತು ರೋಗಿ ಗಳ ಸಮಯ ಉಳಿತಾಯ ಎಂದು ಡಾ. ಚಕ್ರಪಾಣಿ ಅಭಿಪ್ರಾಯ ಪಟ್ಟರು
ಇನ್ನೋರ್ವ ಅತಿಥಿ ಡಾ ಕಿಶನ್ ರಾವ್ ಬಾಳಿಲ ಅವರು ಮಾತನಾಡಿ ವೈದ್ಯನ ಪರಿಣತಿ , ಕೌಶಲ್ಯ ,ರೋಗ ವಿಧಾನ ಮತ್ತು ಔಷಧಿಯ ಜೊತೆಗೆ ರೋಗಿಯ ಶ್ರದ್ಧೆ ಮತ್ತು ನಂಬಿಕೆಗಳೂ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. ಲಯನ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಸೀನ್ ಪೂಜಾರಿ ಶುಭ ಹಾರೈಸಿದರು. ಲೇಖಕ ಡಾ ಮುರಲಿ ಮೋಹನ್ ಚೂಂತಾರು ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.ಕ ಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು ಮತ್ತು ಶುಭ ಹಾರೈಸಿದರು.ಧನ್ವಂತರಿ ಮಂತ್ರ ಪಠಣ ದೊಂದಿಗೆ ಸಭೆ ಆರಂಭ ವಾಯಿತು.ಗಣೇಶ್ಪ್ರಸಾದ್ ಜಿ ಅವರು ವಂದಿಸಿದರು.ರಾಮಕ್ರಷ್ಣ ಭಟ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.ಶ್ರೀ ಭಾರತೀ ಕಾಲೇಜು ಇದರ ಖಜಾಂಚಿ ಉದಯಶಂಕರ್ ನೀರುಪಾಜೆ, ಮಂಗಳೂರು ಹವ್ಯಕ ಸಭಾ ದ ಅಧ್ಯಕ್ಷ ಶ್ರೀ ಮತಿ ಗೀತಾಗಣೇಶ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.