(www.vknews.in) : ಶಿಲುಬೆ ಯೋಧರ ಕ್ರೌರ್ಯವನ್ನು ಕಂಡು ನಲುಗಿದ ಖುದುಸ್ ಕೈ ಬಿಟ್ಟು ಮರುಕ ಪಡುತ್ತಿದ್ದ ಮುಸ್ಲಿಮರು ಕೈ ತಪ್ಪಿದನ್ನು ಮರಳಿ ಪಡೆಯುವ ಸಿದ್ಧತೆಯನ್ನಾರಂಭಿಸಿದರು. ತುರ್ಕಿಯ ಶೆಲ್ಜೂಕಿ ವಂಶಸ್ಥರಾದ ಇಮಾಮುದ್ದೀನ್ ಝೆಂಗಿ ಯವರ ನಾಯಕತ್ವದಲ್ಲಿ ನಡೆದ ಹಲವು ಯುದ್ಧಗಳ ಮೂಲಕ ಮುಸ್ಲಿಮರಿಗೆ ರೋಹ‚ಎಡಿಸ ಮೊದಲಾದ ಪಟ್ಟಣಗಳು ಮರಳಿ ಲಭ್ಯವಾಯಿತು. ಇಮಾಮುದ್ದೀನ್ ಝೆಂಗಿ ಅವರ ಮುನ್ನಡೆಯು ಮುಸ್ಲಿಮರಲ್ಲಿ ಹೊಸ ಬರವಸೆಯನ್ನು ಮೂಡಿಸಿತು. ಇಮಾಮುದ್ದೀನ್ ಝೆಂಗಿ ಅವರು ಇತಿಹಾಸದಲ್ಲಿ ಮುಜಾಹಿದುಲ್ ಖಬೀರ್ (ಮಹಾ ಯೋಧರು) ಎಂದು ಕರೆಸಿ ಕೊಳ್ಳುತ್ತಾರೆ.ಮುಸ್ಲಿಮರ ಈ ಮುನ್ನಡೆಯು ಯುರೋಪಿಯರನ್ನು ದ್ರತಿಗೆಡಿಸಿತು. ಆದರೆ ಇಮಾಮುದ್ದೀನ್ ಝೆಂಗಿ ಅವರನ್ನು ಈಜಿಪ್ತಿನ ಶಿಯಾ ಆಡಳಿತವು ರಹಸ್ಯ ಕಾರ್ಯಾಚರಣೆಯ ಮೂಲಕ ಹತ್ಯೆ ಮಾಡಿದರು.ಅವರ ಮಗ ನೂರುದ್ದೀನ್ ಝೆಂಗಿ ಯವರು ಖುದುಸನ್ನು ಮರಳಿ ಪಡೆಯುವ ಕನಸಿನೊಂದಿಗೆ ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ.
ಇಮಾದುದ್ದೀನ್ ಝೇಂಗಿಯವರಿಂದ ಹಿನ್ನಡೆಯಾಗಿದ್ದ ಯುರೋಪಿಯನ್ನರು ಜರ್ಮನಿ ಮತ್ತು ಇಂಗ್ಲೆಂಡಿನ ರಾಜರುಗಳ ನಾಯಕತ್ವದಲ್ಲಿ ಎರಡನೆಯ ಶಿಲುಬೆಯುದ್ಧಕ್ಕೆ ಸಿದ್ಧತೆ ನಡೆಸಿದರು. A.D.1147ರಲ್ಲಿ ಪ್ರಾರಂಭವಾದ ಎರಡನೆ ಶಿಲುಬೆ ಯುದ್ಧದ ಗುರಿ ಫಲಭರಿತ ಈಜಿಪ್ತೀನ ಪ್ರದೇಶವನ್ನು ವಶಪಡಿಸಿಕೊಳ್ಳುವುದಾಗಿತ್ತು. ಈ ಸಂದರ್ಭದಲ್ಲಿ ಬಲಶಾಲಿ ಶಿಲುಬೆ ಪಡೆಯನ್ನು ಎದುರಿಸುವ ಶಕ್ತಿ ಇಲ್ಲದ ಪಾತಿಮಿ ಶಿಯಾ ಆಡಳಿತಾಧಿಕಾರಿಗಳು ನೂರುದ್ದೀನ್ ಝೆಂಗಿಯವರ ಸಹಾಯವನ್ನು ಬೇಡುತ್ತಾರೆ. ಫಾತಿಮಿಗಳು ತನ್ನ ತಂದೆಯವರ ಕೊಲೆಗಾರರಾದರೂ ನೂರುದ್ದೀನ್ ಝೆಂಗಿಯವರು ಅವರು ಫಾತಿಮಿಗಳ ನೆರವಿಗೆ ಮುಂದಾಗುತ್ತಾರೆ. ಅವರು ತನ್ನ ಸೇನಾಧಿಕಾರಿ ಕುರ್ದ್ ವಂಶಸ್ಥರಾದ ಅಸದುದ್ದೀನ್ ಶಿರ್ಕು ರವರ ನಾಯಕತ್ವದ ಸೇನೆಯನ್ನು ಫಾತಿಮಿಗಳ ಸಹಾಯಕ್ಕಾಗಿ ಕಳುಹಿಸಿ ಕೊಡುತ್ತಾರೆ.
ಈ ಸೇನೆಯಲ್ಲಿ ಒಬ್ಬ ಸೈನಿಕರಾಗಿದ್ದರು ಬಾಲಕನಾದ ಸಲಾಹುದ್ದೀನ್ ಅಯ್ಯೂಬಿ(ರ). ಧೀರ ಯೋಧರಾಗಿದ್ದ ಅಸದುದ್ದೀನ್ ಶಿರ್ಕುರವರನ್ನು ಶಿಯಾ ರಾಜರು ತನ್ನ ಮಂತ್ರಿಯನ್ನಾಗಿ ನಿಯುಕ್ತಿಗೊಳಿಸಿದರು. ಶಿರ್ಕುರವರ ಮರಣಾನಂತರ ಅವರ ಸಹಾಯಕರಾಗಿದ್ದ ಸಲಾಹುದ್ದೀನ್ ಅಯ್ಯೂಬಿ(ರ)ರವರನ್ನು ಮಂತ್ರಿಯನ್ನಾಗಿ ಮುಂದುವರಿಸುತ್ತಾರೆ.ಶಿಯಾ ರಾಜರ ಮರಣಾನಂತರ ಸಲಾಹುದ್ದೀನ್ ಅಯ್ಯೂಬಿ ಈಜಿಪ್ಟಿನ ಅಧಿಕಾರವನ್ನು ವಹಿಸಿಕೊಂಡು ಅಲ್ಲಿ ಶಿಯಾ ಆಡಳಿತವನ್ನು ಕೊನೆಗಾಣಿಸಿ ಸುನ್ನಿ ಆಡಳಿತವನ್ನು ಜಾರಿಗೊಳಿಸುತ್ತಾರೆ. ಈ ವೇಳೆಯಲ್ಲಿ ಪ್ಯಾಲಸ್ತೀನಿನಲ್ಲಿ ನೂರುದ್ದೀನ್ ಝೆಂಗಿಯವರು ಖುದುಸಿನ ವಿಮೋಚನೆಯ ಕನಸಿನೊಂದಿಗೆ ಯುರೋಪಿಯನ್ನರೊಂದಿಗೆ ನಿರಂತರ ಯುದ್ಧದಲ್ಲಿ ಮಗ್ನರಾಗಿದ್ದರು. ಖುದುಸ್ ಮರಳಿ ಪಡೆಯುವಾಗ ಮಸ್ಜಿದುಲ್ ಅಕ್ಸಾದಲ್ಲಿ ಸ್ಥಾಪಿಸಲು ಬೇಕಾದ ಮಿಹರಾಬ್ ಒಂದನ್ನು ನೂರುದ್ದೀನ್ ಝೇಂಗಿಯವರು ನಿರ್ಮಿಸಿಟ್ಟುಕೊಂಡಿದ್ದರು. ಈ ಸಂದರ್ಭದಲ್ಲೇ ಮದೀನಾದಲ್ಲಿ ರಸೂಲ್ (ಸ.ಅ)ರವರ ರೌಳಾ ಶರೀಫ್ ನಿಂದ ಪ್ರವಾದಿಯವರ ದೇಹವನ್ನು ರಹಸ್ಯವಾಗಿ ಕದ್ದೊಯ್ಯುವುದಕ್ಕಾಗಿ ಕ್ರೈಸ್ತರಿಬ್ಬರು ನಡೆಸುತ್ತಿದ್ದ ಗೂಡ ಕಾರ್ಯಾಚರಣೆಯ ಬಗ್ಗೆ ನೂರುದ್ದೀನ್ ಝೆಂಗಿಯವರಿಗೆ ಸ್ವಪ್ನ ದರ್ಶನವಾಗುತ್ತದೆ.
ಅದರಂತೆ ಮದೀನಾಕ್ಕೆ ಆಗಮಿಸಿದ ನೂರುದ್ದೀನ್ ಝೆಂಗಿಯವರು ಒಳಸಂಚನ್ನು ಭಗ್ನಗೊಳಿಸುತ್ತಾರೆ.ತನ್ನ ಖುದುಸ್ ವಿಮೋಚನೆಯ ಕನಸು ನನಸಾಗದೆ ನೂರುದ್ದೀನ್ ಝೆಂಗಿಯವರು ನಿಧನರಾಗುತ್ತಾರೆ. ಅದರೊಂದಿಗೆ ಮುಸ್ಲಿಂ ಸಮುದಾಯದಲ್ಲಿ ಮತ್ತು ಆಡಳಿತಗಾರರಲ್ಲಿ ಮೂಡಿದ ಅನೈಕ್ಯತೆ-ಹಾಗು ಭಿನ್ನಾಭಿಪ್ರಾಯಗಳ ಬಗ್ಗೆ ಚಿಂತಿತರಾದ ಸಲಾಹುದ್ದೀನ್ ಅಯ್ಯೂಬಿ ದೀರ್ಘ ಇಪ್ಪತ್ತು ವರ್ಷಗಳ ಕಾಲ ಮುಸ್ಲಿಂ ಉಮ್ಮತ್ತಿನಲ್ಲಿ ಐಕ್ಯತೆಯನ್ನು ನೆಲೆಗೊಳಿಸಲು ಪ್ರಯತ್ನಿಸುತ್ತಾರೆ.ಅದರೊಂದಿಗೆ ಸಮುದಾಯದಲ್ಲಿ ಧರ್ಮ ನಿಷ್ಠೆಯನ್ನು ಮೂಡಿಸುವ ದಹವ-ಪ್ರಬೋಧನೆಯನ್ನು ಮುಂದುವರಿಸುತ್ತಾರೆ.ಒಮ್ಮೆ ಮುಸ್ಲಿಂ ಸೈನಿಕರ ಶಿಬಿರಕ್ಕೆ ಮಧ್ಯರಾತ್ರಿ ಭೇಟಿ ನೀಡಿದ ಸಲಾಹುದ್ದೀನ್ ಅಯ್ಯೂಬಿಯವರು ಯಾವುದೇ ಸೇನಾ ಶಿಬಿರದಲ್ಲಿ ಬೆಳಕನ್ನು ಕಾಣಲಿಲ್ಲ.
ಇದನ್ನು ನೋಡಿದ ಸಲಾಹುದ್ದೀನ್ ರವರು ತಹಜ್ಜುದ್ ನಮಾಜ್ ವೇಳೆಯಲ್ಲಿ ಮಲಗಿ ನಿದ್ರಿಸುತ್ತಿರುವ ಸೈನಿಕರನ್ನು ಕಟ್ಟಿಕೊಂಡು ಯುದ್ಧಕ್ಕೆ ತೆರಳಲು ಕಾಲ ಪಕ್ವವಾಗಿಲ್ಲ ಎನ್ನುತ್ತಾರೆ. ಸೈನಿಕರಿಗೆ ದೀನಿ ತರಬೇತಿಯನ್ನು ಮುಂದುವರಿಸುತ್ತಾರೆ .ಸ್ವಲ್ಪ ಕಾಲದ ನಂತರ ಪುನಃ ಸೇನಾ ಶಿಬಿರಕ್ಕೆ ಭೇಟಿ ನೀಡಿದಾಗ ಮಧ್ಯರಾತ್ರಿಯಲ್ಲಿ ಅಲ್ಲಾಹನಿಗೆ ನಮಾಜ್ ಮತ್ತು ಪ್ರಾರ್ಥನೆಯಲ್ಲಿ ನಿರತರಾಗಿದ್ದ ಸೈನಿಕರನ್ನು ಕಂಡ ಅಯ್ಯೂಬಿಯವರು ಸಂತುಷ್ಟರಾಗುತ್ತಾರೆ.
— ಸಲಾಹುದ್ದೀನ್ ಅಯ್ಯೂಬಿ, ಕಡಬ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.