ಕೊಚ್ಚಿ (www.vknews.in) : ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಟೆಕ್ ಫೆಸ್ಟ್ ವೇಳೆ ನೂಕುನುಗ್ಗಲು ಉಂಟಾಗಿ ನಾಲ್ವರು ಮೃತಪಟ್ಟಿದ್ದಾರೆ. 46 ಮಂದಿ ಗಾಯಗೊಂಡಿದ್ದಾರೆ. ನೂಕುನುಗ್ಗಲು ಉಂಟಾಗಿ ಬಹುತೇಕ ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳದಿಂದ ಬಂದಿರುವ ಮಾಹಿತಿ. ಟೆಕ್ ಫೆಸ್ಟ್ ಅಂಗವಾಗಿ ಖ್ಯಾತ ಗಾಯಕಿ ಧ್ವನಿ ಬಾನುಶಾಲಿ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಇಂದು ಟೆಕ್ ಫೆಸ್ಟ್ನ ಮುಕ್ತಾಯದ ದಿನವಾಗಿತ್ತು. ಕಾರ್ಯಕ್ರಮ ನಡೆದ ಸಭಾಂಗಣದಲ್ಲಿ ಹಲವು ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ಹಾಗೂ ಇತರರು ಕುಣಿದು ಕುಪ್ಪಳಿಸುವ ಮೂಲಕ ಕಾರ್ಯಕ್ರಮವನ್ನು ಆನಂದಿಸುತ್ತಿರುವಾಗಲೇ ಮಳೆ ಸುರಿದಿದೆ. ಇದರೊಂದಿಗೆ ಸಭಾಂಗಣದ ಹೊರಗಿದ್ದವರು ಒಳಗೆ ನುಗ್ಗಿದರು. ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಗಾಯಾಳುಗಳನ್ನು ಸಮೀಪದ ಕಲಮಸೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರೆಲ್ಲರೂ ವಿದ್ಯಾರ್ಥಿಗಳು ಎಂದು ಶಂಕಿಸಲಾಗಿದೆ. ಆದರೆ ಇದು ಸಾರ್ವಜನಿಕರು ಸೇರಿದಂತೆ ಯಾರು ಬೇಕಾದರೂ ಬರಬಹುದಾದ ಪ್ರದೇಶವಾಗಿದೆ. ಇಂದು ಎರಡು ದಿನಗಳ ಟೆಕ್ ಫೆಸ್ಟ್ನ ಸಮಾರೋಪ ದಿನವಾಗಿತ್ತು. ಬಾಲಿವುಡ್ ಗಾಯಕಿ ಧ್ವನಿ ಬಾನುಶಾಲಿ ಅವರ ಗಾಯನ ಕಾರ್ಯಕ್ರಮಕ್ಕಾಗಿ ಅನೇಕ ಜನರು ಕ್ಯಾಂಪಸ್ಗೆ ಬಂದಿದ್ದರು. ಮೃತರ ಹೆಸರು ಲಭ್ಯವಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.