ಶಿವಮೊಗ್ಗ (www.vknews.in) ; ಜಮೀನಿನಲ್ಲಿ ಸಿಡಿಲು ಬಡಿದು ಸಹೋದರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಭದ್ರಾವತಿ ತಾಲೂಕು ಹುಣಸೆಕಟ್ಟೆ ಜಂಕ್ಷನ್ ಬಳಿ ಮಂಗಳವಾರ ರಾತ್ರಿಸಂಭವಿಸಿದೆ. ಗೌಳಿಗರ ಕ್ಯಾಂಪಿನ ನಿವಾಸಿಗಳಾದ ಬೀರು (32) ಮತ್ತು ಸುರೇಶ್ (35) ಮೃತಪಟ್ಟ ಯುವಕರು. ಇವರು ಜಮೀನಿನಲ್ಲಿ ಭತ್ತ ಕಟಾವ್ ಮಾಡಿ ರಾಶಿ ಹಾಕಿದ್ದರು. ರಾತ್ರಿ ಪರಿಸರದಲ್ಲಿ ಮಳೆಯಾಗಿದ್ದರಿಂದ ಭತ್ತವನ್ನು ರಕ್ಷಿಸಲು ಜಮೀನಿಗೆ ತೆರಳಿದ್ದರು. ಈ ಸಂದರ್ಭ ಸಿಡಿಲು ಬಡಿದು ಬೀರು ಮತ್ತು ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜಮೀನಿಗೆ ಹೋದ ಸಹೋದರರು ತುಂಬಾ ಹೊತ್ತಾದರೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಮನೆಮಂದಿ ಜಮೀನಿನ ಬಳಿ ಹುಡುಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.