(www.vknews.in) ; ಪ್ರಥಮ ಜಾಗತಿಕ ಯುದ್ಧಾನಂತರ ಪರಾಜಿತರಾದ ತುರ್ಕಿ ಸಾಮ್ರಾಜ್ಯವನ್ನು ಬ್ರಿಟಿಷರು ಹಲವಾರು ಭಾಗಗಳಾಗಿ ವಿಭಜಿಸಿದರು . 1924ರಲ್ಲಿ ಕೊನೆಯ ಉಸ್ಮಾನಿಯ ಖಲೀಫಾ ಅಬ್ದುಲ್ ಮಜೀದ್ ರವರನ್ನು ಸ್ಥಾನ ಬೃಷ್ಟರನ್ನಾಗಿಸಿ ಗಡಿಪಾರು ಮಾಡುತ್ತಾರೆ. ಈ ವೇಳೆಯಲ್ಲಿ ಭಾರತದಲ್ಲಿ ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ನಡೆಯುತ್ತಿದ್ದ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಖಿಲಾಫತಿನ ಮರುಸ್ಥಾಪನೆಯ ಬೇಡಿಕೆಯನ್ನು ಸೇರ್ಪಡೆಗೊಳಿಸುತ್ತಾರೆ. ನಂತರ ಗಾಂಧೀಜಿ ಹಾಗೂ ಮೌಲಾನ ಮಹಮ್ಮದ್ ಅಲಿ ಮತ್ತು ಮೌಲಾನ ಶೌಕತಲಿ ಅವರ ನಾಯಕತ್ವದಲ್ಲಿ ಭಾರತದ ಸ್ವಾತಂತ್ರ್ಯ ಮತ್ತು ಮುಸ್ಲಿಂ ಖಿಲಾಫತಿನ ಮರುಸ್ಥಾಪನೆಗಾಗಿ ತೀವ್ರ ಹೋರಾಟ ನಡೆಯುತ್ತದೆ.
ಯುದ್ಧಾನಂತರ ಹಳೆಯ ಶ್ಯಾಮ್ ಪ್ರದೇಶವನ್ನು ಬ್ರಿಟಿಷರು ನಾಲ್ಕು ಭಾಗಗಳಾಗಿ ವಿಭಜಿಸುತ್ತಾರೆ. ಸಿರಿಯಾವನ್ನು ಫ್ರಾನ್ಸ್ ನ ಅಧೀನಕ್ಕೊಪ್ಪಿಸಿತ್ತಾರೆ. ಈ ವೇಳೆ ಫ್ರಾನ್ಸ್ ಸೇನಾಧಿಕಾರಿಯು ಡಮಸ್ಕಸ್ ನಲ್ಲಿರುವ ಸಲಾಹುದ್ದೀನ್ ಅಯ್ಯೂಬಿ (ರ)ರವರ ಗೋರಿಯ ಮೇಲೆ ನಿಂತು “ಓ ಸಲಾಹುದ್ದೀನ್, ನಾವು ಮರಳಿ ಬಂದಿದ್ದೇವೆ” ಎನ್ನುತ್ತಾನೆ . ಪ್ಯಾಲಸ್ತೀನ್ ಪ್ರದೇಶವನ್ನು ಬ್ರಿಟಿಷರು ಸ್ವತಃ ತಾವೇ ಇರಿಸಿಕೊಳ್ಳುತ್ತಾರೆ. ಇದೇ ವೇಳೆ ಜಾಗತಿಕ ರಾಷ್ಟ್ರಗಳ ಸಂಘಟನೆಯಾಗಿ ಲೀಗ್ ಆಫ್ ನೇಶನ್ಸ್ ಎಂಬ ಸಂಘಟನೆಯು ಜನ್ಮತಾಳುತ್ತದೆ.ಬ್ರಿಟಿಷರು ತಮ್ಮ ವಶದಲ್ಲಿದ್ದ ಪ್ಯಾಲಸ್ತೀನ್ ಪ್ರದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಯಹೂದಿಗಳ ವಲಸೆಗೆ ಝಯನಿಸ್ಟರಿಗೆ ನೆರವಾಗುತ್ತದೆ.
ಯುದ್ಧದಲ್ಲಿ ಪರಾಜಿತರಾಗಿದ್ದ ಜರ್ಮನಿ ಮತ್ತು ಇಟಲಿಯ ಆತ್ಮಭಿಮಾನಕ್ಕಾದ ಧಕ್ಕೆಯನ್ನು ನೆಪವಾಗಿಸಿಕೊಂಡು ಇಟಲಿ ಮತ್ತು ಜರ್ಮನಿಯಲ್ಲಿ ಫ್ಯಾಸಿಸ್ಟ್ ಮತ್ತು ನಾಸಿಸ್ಟ್ ಶಕ್ತಿಗಳು ಪ್ರಾಬಲ್ಯಪಡೆದು ಜಾಗತಿಕ ಶಾಂತಿಗೆ ಹೊಸ ಬೆದರಿಕೆಯಾಗುತ್ತದೆ.ಲೀಗ್ ಆಫ್ ನೇಶನ್ಸ್ ನ ಪಕ್ಷಪಾತಿತನದ ಧೋರಣೆಯು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ.ಈ ಎಲ್ಲಾ ಕಾರಣಗಳಿಂದಾಗಿ ಜಗತ್ತು ಮತ್ತೊಂದು ಮಹಾಯುದ್ಧಕ್ಕೆ ದೂಡಲ್ಪಟ್ಟಿತು. ತೀವ್ರ ಯಹೂದಿ ವಿರುದ್ಧನಾಗಿದ್ದ ಅಡಾಲ್ಟ್ ಹಿಟ್ಲರ್ ಜರ್ಮನಿಯಲ್ಲಿ ಲಕ್ಷಾಂತರ ಮಂದಿ ಯಹೂದಿಗಳ ಹತ್ಯೆ ಮಾಡಿದನು. ಈ ವೇಳೆ ಯಹೂದಿಗಳೆಡೆಯಲ್ಲಿ ದೊಡ್ಡಮಟ್ಟದ ಬೆಂಬಲವೇನೂ ಇಲ್ಲದಿದ್ದ ಝಯನಿಸ್ಟರು ಹಿಟ್ಲರ್ ನೊಂದಿಗೆ ರಹಸ್ಯವಾಗಿ ಒಳ ಒಪ್ಪಂದವೂಂದನ್ನು ಮಾಡಿಕೊಂಡು ಯಹೂದಿ ಹತ್ಯಾಕಾಂಡವನ್ನು ಹೆಚ್ಚುವಂತೆ ಮಾಡುತ್ತಾರೆ.
ಈ ಮೂಲಕ ಯಹೂದಿಗಳ ಮಧ್ಯೆ ತಮ್ಮ ಸ್ವಾಧೀನವನ್ನು ಹೆಚ್ಚಿಸಿ ತಮ್ಮ ಆಶಯಗಳ ಈಡೇರಿಕೆಗೆ ರಂಗ ಸಜ್ಜುಗೊಳಿಸಬಹುದೆಂದು ಝಯನಿಸ್ಟರು ಲೆಕ್ಕಾಚಾರ ಹಾಕಿದರು. ಅವರ ಲೆಕ್ಕಚಾರ ನಿಜವಾಯಿತು ಕೂಡ.ಪ್ಯಾಲಸ್ತೀನಿಗೆ ಯಹೂದಿಗಳ ವಲಸೆಯು ಪ್ರವಾಹದೋಪಾದಿಯಲ್ಲಾಯಿತು. 1944ರಲ್ಲಿ ಯುದ್ಧ ಕೊನೆಗೊಂಡಿತು. ಲೀಗ್ ಆಫ್ ನೇಶನ್ಸ್ ಬದಲಾಗಿ ಯುನೈಟೆಡ್ ನೇಶನ್ಸ್ ಓರ್ಗನೈಸೇಶನ್(United Nations Organization) UNO- ವಿಶ್ವಸಂಸ್ಥೆ ರಚನೆಯಾಯಿತು.
UNO-ದ ಅಧೀನದಲ್ಲಿ ಪ್ಯಾಲಸ್ತೀನನ್ನು ಮತ್ತೆ ಮೂರು ಭಾಗಗಳಾಗಿ ವಿಭಜಿಸಲಾಯಿತು. ಈ ರೀತಿ ವಿಭಜನೆಗೊಂಡ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಯಹೂದಿ ರಾಷ್ಟ್ರವಾದ ಇಸ್ರೇಲ್ ಎಂಬ ನೂತನ ರಾಷ್ಟ್ರವು 1948ರಲ್ಲಿ ಉದಯಿಸಿತು. ವಿಭಜಿಸಿದ ಪ್ಯಾಲಸ್ತೀನಿನ ಇನ್ನೊಂದು ಭಾಗದಲ್ಲಿ ಸ್ವತಂತ್ರ ಪ್ಯಾಲಸ್ತೀನ್ ರಾಷ್ಟ್ರವನ್ನು ಸ್ಥಾಪಿಸಲಾಗುವುದೆಂದು ಘೋಷಿಸಲಾಯಿತು. ಆ ಘೋಷಣೆಯು ಕಾಗದದಲ್ಲೇ ಉಳಿಯಿತು.ವಿಭಜಿಸಲಾದ ಪ್ಯಾಲಸ್ತೀನಿನ ಇನ್ನೊಂದು ಭಾಗವಾದ ಖುದುಸ್ ಪ್ರದೇಶವು ವಿಶ್ವ ಸಂಸ್ಥೆಯ ನಿಯಂತ್ರಣದಲ್ಲಾಯಿತು.
ಜಾಗತಿಕ ಮುಸ್ಲಿಮರ ಹೃದಯಕ್ಕೆ ಗಾಸಿಗೊಳಿಸಿ ಜನ್ಮವೆತ್ತಿದ ಇಸ್ರಾಯಿಲ್ ಎಂಬ ಚಿಕ್ಕ ದೇಶ ಜಾಗತಿಕ ಮಹಾಶಕ್ತಿಗಳ ಲಾಲನೆ-ಪಾಲನೆ ಯೊಂದಿಗೆ ರಾಕ್ಷಸಾಕಾರವಾಗಿ ಬೆಳೆಯಿತು.ಭರವಸೆ ನೀಡಲಾದ ಪ್ಯಾಲಸ್ತೀನ್ ದೇಶ ಇಂದಿಗೂ ಕೈಗೆಟಕದ ಗಂಟಾಗಿ ಮುಂದುವರಿದಿದೆ.ಏಳುವರೆ ದಶಕಗಳಿಂದ ನೊಂದ ಹೃದಯದೊಂದಿಗೆ,ನರಕ ಸಮಾನ ಜೀವನ ಸಾಗಿಸುತ್ತಿರುವ ಪ್ಯಾಲಸ್ತೀನ್ ಜನತೆಯು ತಮ್ಮ ತಾಯಿನಾಡಿನ ವಿಮೋಚನೆಯ ಕನಸಿನೊಂದಿಗೆ ನಿರಂತರ ಹೋರಾಟದಲ್ಲಿದ್ದಾರೆ. ಪ್ಯಾಲಸ್ತೀನಿನ ಜನತೆಯ ವಿಮೋಚನೆಗೆ ಬೆಂಬಲವಾಗಿ, ಅವರಿಗಾಗಿ ಅಲ್ಲಾಹನೊಂದಿಗೆ ಕಣ್ಣೀರು ಸುರಿಸುತ್ತಾ ನಾವು ಪ್ರಾರ್ಥಿಸೋಣ.
ಅರಬ್ ಮುಸ್ಲಿಂ ದೇಶಗಳ ಮಧ್ಯೆ ಪಾಶ್ಚಿಮಾತ್ಯರ ಕುಮ್ಮಕ್ಕಿನಿಂದ ಅಕ್ರಮ ಮತ್ತು ಅನ್ಯಾಯವಾಗಿ ಪ್ರತಿಷ್ಠಾಪಿಸಲಾದ ಇಸ್ರೇಲ್ ರಾಷ್ಟ್ರವು ಪ್ಯಾಲಸ್ತೀನಿನ ಮೂಲ ನಿವಾಸಿಗಳನ್ನು ತಾಯಿ ನಾಡಿನಲ್ಲೆ ನಿರಾಶ್ರಿತರಾಗಿ ಮಾಡಿ ಯುದ್ಧದ ಹೆಸರಿನಲ್ಲಿ ಅವರ ವಂಶಹತ್ಯೆಗೆ ಯತ್ನಿಸುತ್ತಿರುವ 75 ವರ್ಷಗಳ ಕಾಲದ ಭೀಕರ ಕಥೆ-ವ್ಯಥೆಯ ಬಗ್ಗೆ ಮುಂದಿನ ಭಾಗದಲ್ಲಿ ನಿರೀಕ್ಷಿಸಿ.
– ಸಲಾಹುದ್ದೀನ್ ಅಯ್ಯೂಬಿ-ಕಡಬ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.