ವಿಶ್ವ ಕನ್ನಡಿಗ ನ್ಯೂಸ್(www.vknews.in): ಧಾರ್ಮಿಕ ಸ್ವಾತಂತ್ರ್ಯ ಮತ್ತು ಹಬ್ಬಗಳ ಆಚರಣೆ ಎಂಬ ವಿಷಯದ ಬಗ್ಗೆ ಭಾಷಣ ಆರಂಭಿಸಿದ ಉಸ್ತಾದರು ಪ್ರತಿಯೊಂದು ಧರ್ಮದಲ್ಲಿ ಹಬ್ಬ,ಹರಿದಿನಗಳನ್ನು ಆಚರಿಸುವ ಕುರಿತು ಸಂಪೂರ್ಣವಾದ ಹಕ್ಕನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ ಎಂದರು.ನಮ್ಮ ಧರ್ಮ ನಮಗೆ ಪರರ ಧರ್ಮ ಪರರಿಗೆ ಎಂಬ ಮಾತಿನಂತೆ ಪ್ರತಿಯೊಂದು ಧರ್ಮದ ಧಾರ್ಮಿಕ ಕಟ್ಟುಪಾಡು ವಿಭಿನ್ನ ಮತ್ತು ವೈವಿಧ್ಯತೆಯಿಂದ ಕೂಡಿರುತ್ತದೆ ಅಂದ ಮಾತ್ರಕ್ಕೆ ಅವುಗಳನ್ನು ವಿರೋಧಿಸುವುದು ಸಲ್ಲದು ಎಂದರು.ನಮ್ಮ ಧರ್ಮ ನಮಗೆ ಹೇಳಿಕೊಟ್ಟಿದೆಯೋ ಅವುಗಳನ್ನು ಪಾಲಿಸುವುದು,ವಿರೋಧಿಸಿರುವ ವಸ್ತು ಅಥವಾ ಕಟ್ಟಳೆಗಳಿಂದ ದೂರವಿರುವುದು ಒಬ್ಬ ನೈಜ ಧರ್ಮ ಅನುಯಾಯಿಯ ಕರ್ತವ್ಯವೆಂದು ಜುಮಾ ಭಾಷಣದಲ್ಲಿ ತಿಳಿಸಿದರು. ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದೆ ಇಂತಹ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಿ ಶಾಂತಿ,ಸಹೋದರತೆ,ಏಕತೆಯನ್ನು ಗಟ್ಟಿಗೊಳಿಸುವುದು ತಪ್ಪಲ್ಲ ಆದರೆ ಅವರ ಹಬ್ಬಗಳ ಕಾರ್ಯಕ್ರಮದಲ್ಲಿ ಭಾಗಿಯಾಗುವುದನ್ನು ಇಸ್ಲಾಂ ಒಪ್ಪುವುದಿಲ್ಲ ಎಂದರು.ಏಕೆಂದರೆ ಮದ್ಯಸಾರ ಪಾನೀಯ,ಕ್ಯಾಬಾರ ಡ್ಯಾನ್ಸ್ ,ಕೇಕ್ ಕತ್ತರಿಸುವುದು ಅಥವಾ ಕ್ರಿಸ್ಮಸ್ ಹಬ್ಬದ ಸಂಕೇತವನ್ನು ಮನೆಗಳಲ್ಲಿ ಪ್ರದರ್ಶಿವುದು ಇಸ್ಲಾಂ ಕಟ್ಟುನಿಟ್ಟಾಗಿ ನಿಷೇಧಿಸಿದೆ.ಇವುಗಳಿಂದ ಇಮಾನ್ ನಷ್ಟಪಡುವುದರಿಂದ ನಿಸ್ಸಂಶಯವಾಗಿ ಆತ ಧರ್ಮದಿಂದ ಹೊರನಡೆದಂತೆ ಎಂದರು.ಒಬ್ಬ ಮುಸ್ಲಿಮನಾಗಿ ಇನ್ನೊಂದು ಧರ್ಮದ ಧಾರ್ಮಿಕ ಕಟ್ಟುಪಾಡು,ತತ್ವ ಸಿದ್ದಾಂತಗಳನ್ನು ಹಿಂಬಾಲಿಸಿದರೆ ಅಥವಾ ಅನುಸರಿಸಿದರೆ ಅಂತಹ ವ್ಯಕ್ತಿ ಅದೇ ಗುಂಪಿಗೆ ಸೇರಿದವನೇ ಹೊರತು ನಮ್ಮ ಧರ್ಮಕ್ಕೆ ಸೇರಿದನಲ್ಲ ಎಂಬುವುದಾಗಿ ಪ್ರವಾದಿ ವಚನದಲ್ಲಿ ಸ್ಪಷ್ಟ ಉಲ್ಲೇಖವಿದೆ ಎಂದರು. ಇನ್ನೊಂದು ಧರ್ಮದ ಆಚರಣೆಗಳನ್ನು ಗೌರವಿಸುವ ಜೊತೆಗೆ ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸಿ ಬದುಕಲು ಸರ್ವಶಕ್ತನಾದ ಅಲ್ಲಾಹು ನಮಗೆಲ್ಲರಿಗೂ ವಿವೇಚನೆ ಮತ್ತು ಬುದ್ದಿಯನ್ನು ನೀಡಲಿ ಎಂಬ ಪ್ರಾರ್ಥನೆಯೊಂದಿಗೆ ಜುಮಾ ಭಾಷಣವನ್ನು ಮುಕ್ತಾಯಗೊಳಿಸಿದರು.
ವರದಿ:ಮುಸ್ತಫಾ ನೆಕ್ಕರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.