ಜೆದ್ದಾ(www .vknews.in): ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯೊಂದು ಈಡೇರುತ್ತಿದೆ. ಮಂಗಳೂರಿನಿಂದ ಸೌದಿ ಅರೇಬಿಯಾದ ವಾಣಿಜ್ಯ ನಗರಿ ಜೆದ್ದಾಕ್ಕೆ ವಾರಂಪ್ರತೀ ನೇರ ವಿಮಾನ ಸೇವೆಯನ್ನು ಏಪ್ರಿಲ್ 3 ರಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಾರಂಭಿಸಲಿದೆ. ಈ ಕುರಿತು ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಿದ ಏರ್ ಇಂಡಿಯಾ ಈ ನೇರ ಸೇವೆಯ ಟಿಕೆಟ್ ಬುಕ್ಕಿಂಗ್ ಕೂಡ ಪ್ರಾರಂಭಿಸಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರತೀ ಬುಧವಾರ ಮಂಗಳೂರಿನಿಂದ ಜೆದ್ದಾಕ್ಕೂ , ಅದೇ ದಿನ ಜೆದ್ದಾದಿಂದ ಮಂಗಳೂರಿಗೂ ನೇರ ವಿಮಾನ ಸೇವೆ ನೀಡಲಿದ್ದು,
ಪ್ರತೀ ಬುಧವಾರ ಮಂಗಳೂರಿನಿಂದ ಮಧ್ಯಾಹ್ನ 2-50 ಕ್ಕೆ ಹೊರಟು ಸೌದಿ ಸಮಯ ಸಾಯಂಕಾಲ 6-25 ಕ್ಕೆ ಜಿದ್ದಾ ತಲುಪಲಿರುವ ವಿಮಾನವು ಜಿದ್ದಾದಿಂದ ರಾತ್ರಿ 7-25 ಕ್ಕೆ ಹೊರಟು ಮುಂಜಾನೆ 3.40 ಕ್ಕೆ ಮಂಗಳೂರು ತಲುಪಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.